ಉತ್ತರ ಕನ್ನಡ : ಮುರುಡೇಶ್ವರ ಪ್ರವಾಸೋದ್ಯಮಕ್ಕೆ ಫ್ಲೋಟಿಂಗ್ ಬ್ರಿಡ್ಜ್ ಸೇರ್ಪಡೆಗೊಂಡಿದ್ದು, ಉಜರೆಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇಂದು ಲೋಕಾರ್ಪಣೆ ಮಾಡಿದರು.
ಪ್ರವಾಸಿಗರಿಗೆ ಮುದ ನೀಡಲು ಮುರುಡೇಶ್ವರದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿಯೇ ಇದು ಮೊಟ್ಟ ಮೊದಲ ಪ್ಲೋಟಿಂಗ್ ಬ್ರೀಡ್ಜ್ ಆಗಿದೆ. ಇದು 150ಮೀಟರ್ ಉದ್ದವಿದ್ದು ಜಿಲ್ಲೆಯಲ್ಲೆ ಮೊದಲ ಬಾರಿಗೆ ಫ್ಲೋಟಿಂಗ್ ಬ್ರಿಡ್ಜ್ ಆರಂಭಿಸಲಾಗಿದೆ.
ಸಮುದ್ರದಲ್ಲಿ 150 ಮೀ ವರೆಗೂ ಪ್ಲೋಟಿಂಗ್ ಸೇತುವೆ ಮೇಲೆ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ನೇತ್ರಾಣಿ ಮತ್ತು ಒಶಿಯನ್ ಅಡ್ವೆಂಚರ್ ನಿಂದ ಆರಂಭವಾದ ಫ್ಲೋಟಿಂಗ್ ಬ್ರಿಡ್ಜ್, ಸ್ಕೂಬಾ ಡೈವಿಂಗ್ ಜತೆ ಈಗ ಮುರುಡೇಶ್ವರದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ. ಏಕಕಾಲದಲ್ಲಿ 100 ಜನ ಓಡಾಡ ಬಹುದಾದ ಸುರಕ್ಷಿತ ಫ್ಲೋಟಿಂಗ್ ಬ್ರಿಡ್ಜ್ ಇದಾಗಿದ್ದು ಮುಂಬೈನ ಎಚ್.ಎನ್ ಮರೈನ್ ಕಂಪನಿ ಇದನ್ನ ನಿರ್ಮಾಣ ಮಾಡಿದೆ.
ಸಮುದ್ರದಲ್ಲಿ ಹೆಜ್ಜೆ ಹಾಕಲು ಅವಕಾಶ
ವೀಕೆಂಡ್, ರಜಾ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತವೆ. ಅದರಲ್ಲೂ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೀಗಾಗಿ, ಸ್ಕೂಬಾ ಡೈವ್‌ನಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ ತಯಾರಾಗಿದ್ದು, ಸಮುದ್ರದಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡಲಾಗುತ್ತಿದೆ.