ಶಿವಮೊಗ್ಗ : ನಾನು ಸಹ ಹಿಂದೂ ಧರ್ಮಕ್ಕೆ ಸೇರಿದವನು. ನನ್ನ ತಂದೆ, ತಾಯಿ ಸಹ ಹಿಂದೂ ಧರ್ಮದವರೇ. ನನಗೆ ಹಿಂದೂ ಧರ್ಮದ ಬಗ್ಗೆ ಗೌರವ ಇದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಮತ್ತು ಆರಗಜ್ಞಾನೇಂದ್ರ ರವರು ಚರ್ಚೆಗೆ ಬರಲಿ ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಸನಾತನ ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಹಲವು ಪುಸ್ತಕಗಳನ್ನು ಓದಿದ್ದೇನೆ. ಸನಾತನ ಧರ್ಮಕ್ಕೆ ನಿಘಂಟಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ. ನಾನು ಯಾವತ್ತೂ ಸನಾತನ ಧರ್ಮದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಅಷ್ಟಕ್ಕೂ ಸನಾತನ ಧರ್ಮಕ್ಕೆ ಪ್ರತೇಕ ಕೃತಿಯೂ ಇಲ್ಲ. ಅದನ್ನು ಬರೆದವರು ಇಲ್ಲ. ಅನಾದಿಕಾಲದಿಂದ ಬಂದಿದ್ದನ್ನೆ ನಾವು ಸನಾತನ ಧರ್ಮ ಎಂದು ಹೇಳುತ್ತೇವೆ ಎಂದು ಹೇಳಿದ್ದಾರೆ.
RSS, ರಾಮಸೇನೆ, BJP ಎಲ್ಲಾ ಒಂದೇ ಸಂತಾನ
ಸೈದ್ಧಾಂತಿಕವಾಗಿ ನಾನು ಬಿಜೆಪಿಯನ್ನು ವಿರೋಧ ಮಾಡುತ್ತೇನೆ. ವೈಯುಕ್ತಿಕವಾಗಿ ನಾನು ಯಾರ ವಿರೋಧಿಯೂ ಅಲ್ಲ. ಬಿಜೆಪಿಯೊಂದಿಗೆ ಎಂದಿಗೂ ಹೊಂದಾಣಿಕೆಯನ್ನು ಮಾಡಿಕೊಂಡಿಲ್ಲ. ಹಾಗೆ ನೋಡಿದರೆ ದೇವಸ್ಥಾನಗಳಿಗೆ ಆರಗ ಜ್ಞಾನೇಂದ್ರರಿಗಿಂತ ಹೆಚ್ಚು ಹಣ ಕೊಟ್ಟವನೇ ನಾನು. ಸಾಹಿತ್ಯ ಪರಿಷತ್‍ಗೆ ಜಾಗ ಕೊಟ್ಟಿದ್ದು ನಾನು, ಹೀಗಿರುವಾಗ ನಾನು ಹಿಂದೂ ಧರ್ಮದ ವಿರೋಧಿ ಎಂದು ಹೇಗೆ ಹೇಳುತ್ತಾರೆ. ಆರ್ಎಸ್ಎಸ್, ರಾಮಸೇನೆ, ಬಿಜೆಪಿ ಇವೆಲ್ಲವೂ ಒಂದೇ ಸಂತಾನ ಎಂದು ತಿಳಿಸಿದ್ದಾರೆ.
ಮುಸ್ಲಿಂ ವಿರುದ್ಧ ಮಾತನಾಡಿದ್ರೆ ವೋಟು ಬರುತ್ತೆ
ಬಿಜೆಪಿಯವರು ಮುಸ್ಲಿಂ ವಿರುದ್ಧ ಮಾತನಾಡಿದರೆ ಮತ ಬರುತ್ತೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಅದು ಸುಳ್ಳು. ಸಾರ್ವಕರ್ ಬಗ್ಗೆ ಮಾತನಾಡುವ ಅವರು ಅವರ ಕಟ್ಟಡದ ಕೆಳಗೆಯೇ ಗೂಡ್ಸ್ ವಾಸಿಸುತ್ತಾ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಹಿಂದೂ ಮಹಾಸಭಾದ ಅಧ್ಯಕ್ಷರೇ ಇವರಲ್ಲವೇ ಎಂದು ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ.