ರಾಮನಗರ : ವಿದ್ಯುತ್ ತಂತಿ ಸ್ಪರ್ಶಿಸಿ 14 ವರ್ಷದ ಗಂಡಾನೆ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ಅರಣ್ಯ ವಲಯದ ಕೋಡಿಹಳ್ಳಿಯಲ್ಲಿ ನಡೆದಿದೆ.
ನಂಜೇಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾಡಾನೆ ಮೃತ ಪಟ್ಟಿದ್ದು, ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಹಾಕಿದ್ದರಿಂದ ಈ ಅವಘಡ ಸಂಭವಿಸಿದೆ. ಕಾಡಾನೆ ತಮ್ಮ ಜಮೀನಿನಲ್ಲಿ ಸಾವನ್ನಪ್ಪಿದ್ದರಿಂದ ಮಾಲೀಕ ನಂಜೇಗೌಡ ಅವರೇ, ಜಮೀನಿನಲ್ಲಿ ಗುಂಡಿ ತೆಗೆದು ಕಾಡಾನೆಗೆ ಅಂತ್ಯಕ್ರಿಯೆ ಮಾಡಿದ್ದರು.
ಇದನ್ನೂ ಓದಿ: ರಾಜ್ಯದ ಜನತೆಗೆ ಶಾಕಿಂಗ್ ಸುದ್ದಿ : ಮತ್ತೆ ತಟ್ಟಲಿದೆ ಹಾಲಿನ ದರ ಏರಿಕೆ ಬಿಸಿ!
ಇನ್ನು ಈ ಘಟನೆ ನಡೆದು 3 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ವಿಚಾರ ತಿಳಿದು ಸ್ಥಳಕ್ಕೆ DFO ರಾಮಕೃಷ್ಣಯ್ಯ, RFO ದಾಳೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತ ಆನೆ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಅದೇ ಜಾಗದಲ್ಲಿ ಕಾಡಾನೆ ಮಣ್ಣು ಮಾಡಿದ್ದಾರೆ. ಘಟನೆ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಜಮೀನು ಮಾಲೀಕ ನಂಜೇಗೌಡ ಮೇಲೆ ಪ್ರಕರಣ ದಾಖಲಾಗಿದೆ.