Wednesday, January 22, 2025

ಊಟ ಕೇಳಿದ ಮಕ್ಕಳಿಗೆ ಮನಸೋ ಇಚ್ಛೆ ಥಳಿಸಿದ ವಾರ್ಡನ್

ಹಾವೇರಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಹೊಸದಾಗಿ ಬಂದ ಹಾಸ್ಟೆಲ್ ವಾರ್ಡನ್ ಮುಗ್ಧ ಮಕ್ಕಳನ್ನ ಮನಸೋ ಇಚ್ಛೆ ಥಳಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. ಮೂಲಭೂತ ಸೌಕರ್ಯಗಳಿಂದ ವಂಚಿಸಿ, ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿದ್ದಾರೆ.

ವಿವಿಧ ಸಮಸ್ಯೆ ಹೇಳಿಕೊಂಡ ವಿದ್ಯಾರ್ಥಿಗಳಿಗೆ ವಾರ್ಡನ್​​ ಬೆದರಿಕೆ ಹಾಕಿದ್ದಾರಂತೆ. ಊಟ ಕೇಳಿದ ವಿದ್ಯಾರ್ಥಿಗಳಿಗೆ ವಾರ್ಡನ್ ಚಾಟಿಯಿಂದ ಥಳಿಸಿದ್ದಾರೆ. ಇದರ ಪರಿಣಾಮ ಮಕ್ಕಳಿಗೆ ಮೈತುಂಬಾ ಗಾಯವಾಗಿದೆ. ಇನ್ನು ಹಲ್ಲೆ ಮಾಡಿದ ವಸತಿ ನಿಲಯದ ಮೇಲ್ವಿಚಾರಕಿಯನ್ನು ಹುದ್ದೆಯಿಂದ ಅಮಾನತು ಮಾಡಬೇಕೆಂದು ವಿದ್ಯಾರ್ಥಿಗಳು ಮೇಲಾಧಿಕಾರಿಗಳಿಗೆ ದೂರು‌ ನೀಡಿದ್ದಾರೆ. ವಸತಿ ಶಾಲೆ ಬಂದ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯಲ್ಲಿದ್ದಾರೆ 125 ಮಕ್ಕಳು

ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ಶಾಲೆಯಲ್ಲಿ 1 ರಿಂದ 5ನೇ ತರಗತಿ ವರೆಗೆ ಅಭ್ಯಾಸ ಮಾಡುವ 125 ಮಕ್ಕಳು ಇದ್ದಾರೆ. ಎಸ್‌ಎಫ್‌ಐ ಸಂಘಟನೆಗೆ ಈ ಮಾಹಿತಿ ತಿಳಿದ ತಕ್ಷಣ, ಎಸ್ಎಫ್ಐನ ನಿಯೋಗ ಭೇಟಿ ನೀಡಿ ವಿಚಾರಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ನಂತರ ವಿದ್ಯಾರ್ಥಿಗಳು ಧೀಡಿರ್ ಹೋರಾಟ ಧರಣಿ ನಡೆಸಿ ವಾರ್ಡನ್ ಬೇಡವೇ ಬೇಡ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES