Monday, December 23, 2024

ರೈತರಿಗೆ 2,000 ರೂ. ಬರ ಪರಿಹಾರ : ಸಚಿವ ಕೃಷ್ಣಭೈರೇಗೌಡ

ಬೆಳಗಾವಿ : ರಾಜ್ಯದ ಬರ ನಿರ್ವಹಣೆಗೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿ ರೈತರಿಗೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ‌ ರವಿಕುಮಾರ್ ಪ್ರಶ್ನೆ ಕೇಳಿದರು. ರೈತರಿಗೆ ಸರ್ಕಾರ ಕೊಡುವ 2 ಸಾವಿರ ಪರಿಹಾರ ಸಾಕಾಗೊಲ್ಲ. 125 ವರ್ಷಗಳ ಬಳಿಕ ಇಷ್ಟು ಬರ ಬಂದಿದೆ. 10 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ಬರ ಪರಿಹಾರ ಹಣ ಕೊಡಬೇಕು. ಸಿಎಂ ಅವರು ಒಂದು ಸಮುದಾಯಕ್ಕೆ ಘೋಷಣೆ ಮಾಡಿದ್ರು. ಅದನ್ನ ರೈತರಿಗೆ ಕೊಡಿ. ರೈತರಿಗೆ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಕೃಷಿ, ಗೃಹ ಇಲಾಖೆ ಕಾರ್ಯದರ್ಶಿಗಳ ಭೇಟಿ ಮಾಡಿದ್ದೇವೆ. ಕೇಂದ್ರ‌ ಹಣಕಾಸು ಸಚಿವರ ಭೇಟಿ ಮಾಡಿ ಹಣ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇವೆ‌. ಕೇಂದ್ರ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಭಾಗಶಃ ಪರಿಹಾರವಾಗಿ 2 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಇದು ಬಿಡುಗಡೆ ಆಗುತ್ತದೆ ಎಂದರು.

2,500 ಕೋಟಿ ಪರಿಹಾರ ಕೊಡ್ತೀವಿ

ಈ ಬಾರಿ ಮ್ಯಾನ್ಯುಯಲ್ ಆಗಿ ರೈತರಿಗೆ ಹಣ ಕೊಡ್ತಿಲ್ಲ. ನೇರವಾಗಿ ರೈತರ ಅಕೌಂಟ್‌ಗೆ ಆನ್‌ಲೈನ್ ಮೂಲಕ ಹಣ ಹಾಕ್ತೀವಿ‌. ರೈತರಿಗೆ ಇನ್ಶುರೆನ್ಸ್‌ನಿಂದ 2,500 ಕೋಟಿ ಪರಿಹಾರ ಕೊಡ್ತೀವಿ. NDRF-SDRF ಅಡಿ 4 ಸಾವಿರ ಕೋಟಿ ಪರಿಹಾರ ಕೊಡುವ ಸಿದ್ದತೆ ಆಗಿದೆ‌. ಕೇಂದ್ರದ ಹಣ ಬಿಡುಗಡೆ ಆದ ಕೂಡಲೇ ಹಣ ಕೊಡ್ತೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES