Monday, December 23, 2024

ನಟ ಸಲ್ಮಾನ್ ಖಾನ್ ಜೊತೆ ಸಿಎಂ ಮಮತಾ ಸಖತ್ ಡ್ಯಾನ್ಸ್

ಬೆಂಗಳೂರು : ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(KIFF 2023)ದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಟ ಸಲ್ಮಾನ್ ಖಾನ್ ಜೊತೆಗೆ ಸಖತ್ ಡ್ಯಾನ್ಸ್​ ಮಾಡಿ ಸುದ್ದಿಯಾಗಿದ್ದಾರೆ.

ಸಲ್ಮಾನ್ ನಟನೆಯ ಟೈಗರ್-3 ಚಿತ್ರವು ಈ ವರ್ಷದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಸಿನಿಮಾದ ಅರಜಿತ್ ಸಿಂಗ್ ಹಾಡಿರುವ ಒಂದು ಹಾಡನ್ನು ವೇದಿಕೆಯಲ್ಲಿ ಪ್ರಸಾರ ಮಾಡಲಾಗಿತ್ತು. ಹಾಡಿಗೆ ಹೆಜ್ಜೆ ಹಾಕುವಂತೆ ನಟ ಸಲ್ಮಾನ್ ಖಾನ್, ಮಮತಾ ಬ್ಯಾನರ್ಜಿ ಅವರಿಗೆ ಒತ್ತಾಯಿಸಿದ್ದು, ಎಲ್ಲರ ಒತ್ತಾಯಕ್ಕೆ ಮಣಿದು ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದಾರೆ.

ಸಮಾರಂಭದಲ್ಲಿ ಆಗಿದ್ದೇನು?

ಕುರ್ಚಿ ಮೇಲೆ ಕುಳಿತಿದ್ದ ಮಮತಾ ಅವರನ್ನು ಸಲ್ಮಾನ್ ಖಾನ್ ಕೈ ಹಿಡಿದು ವೇದಿಕೆ ಮುಂಭಾಗಕ್ಕೆ ಕರೆತಂದು ಜೊತೆಗೂಡಿ ನೃತ್ಯ ಮಾಡಿ ಗಮನ ಸೆಳೆದರು. ಈ ವೇಳೆ ಅವರಿಗೆ ನಿರ್ದೇಶಕ ಮಹೇಶ್ ಭಟ್, ಭಾರತ ತಂಡ ಮಾಜಿ ನಾಯಕ ಸೌರವ್ ಗಂಗೂಲಿ, ನಟ ಅನಿಲ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಸಾಥ್ ನೀಡಿದರು.

ಡಿ.12ರವರೆಗೆ ಚಲನಚಿತ್ರೋತ್ಸವ

ಡಿಸೆಂಬರ್ 5ರಿಂದ ಪ್ರಾರಂಭವಾಗಿರುವ ಚಲನಚಿತ್ರೋತ್ಸವ ಡಿಸೆಂಬರ್ 12ರವರೆಗೆ ನಡೆಯಲಿದೆ. ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕೃತ ಚಾಲನೆ ನೀಡಿದ್ದಾರೆ. ಎಂಟು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಹಲವು ಭಾಷೆಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

RELATED ARTICLES

Related Articles

TRENDING ARTICLES