Monday, December 23, 2024

ಜಾಹೀರಾತು ಶುಲ್ಕ ನೀಡದೆ ಬಿಬಿಎಂಪಿಗೆ KSCA ವಂಚನೆ!

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ BBMPಗೆ ಜಾಹೀರಾತು ಶುಲ್ಕ ಕಟ್ಟದೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್​ ದೋಖಾ ಮಾಡಿದೆ. ಹತ್ತು ವರ್ಷಗಳಿಂದ ಶುಲ್ಕ ಕಟ್ಟದೇ ನೂರಾರು ಕೋಟಿ‌ ವಂಚನೆ ಎಸಗಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ KSCA ವಂಚನೆ ಬಯಲಿಗೆ ಬಂದಿದೆ. ಪ್ರತಿ ಪಂದ್ಯ ನಡೆಯುವಾಗ ವಿವಿಧ ಸಂಸ್ಥೆ, ಬ್ರ್ಯಾಂಡ್​ಗಳ ಜಾಹೀರಾತು ಪ್ರದರ್ಶನ ನಡೆಯುತ್ತದೆ. ಈ ವೇಳೆ ಪಾಲಿಕೆಗೆ ಸಾಮಾನ್ಯವಾಗಿ ಜಾಹೀರಾತು ಶುಲ್ಕ ಪಾವತಿಸುವುದು ನಿಯಮ. ಆದರೆ, ಸಾವಿರಾರು ಕೋಟಿ ರೂಪಾಯಿ ಜಾಹೀರಾತು ಫಲಕ ಪ್ರದರ್ಶಿಸಿ KSCA ಹಣ ಸಂಗ್ರಹಿದ್ದರು ಪಾಲಿಕೆಗೆ ನಯಾ ಪೈಸೆ ಶುಲ್ಕ ಕಟ್ಟದೇ ವಂಚನೆ ನಡೆಸಿದೆ.

ಇದನ್ನೂ ಓದಿ: ವಾತಾವರಣದಲ್ಲಿ ಏರುಪೇರು: ವಾರಾಂತ್ಯದಲ್ಲಿ ಮಳೆಯ ಅಲರ್ಟ್​ ನೀಡಿದ ಹವಾಮಾನ ಇಲಾಖೆ!

ಈ ನಡುವೆ ಜಾಹೀರಾತು ಶುಲ್ಕ ಕಟ್ಟದಿದ್ದರೂ ಸಹ ಕೆಎಸ್​ಸಿಎ ಗೆ ಬಿಬಿಎಂಪಿ ಡಿಮ್ಯಾಂಡ್ ನೋಟಿಸ್​ ಜಾರಿ ಮಾಡಿಲ್ಲವೆಂಬ ಆರೋಪ ಸಹ ಕೇಳಿ ಬಂದಿದೆ. ಮನೆ ಕಂದಾಯ ಕಟ್ಟದಿದ್ದರೆ ಮನೆ ಮುಂದೆ ಬಂದು ನಿಲ್ಲೋ ಬಿಬಿಎಂಪಿ ಅಧಿಕಾರಿಗಳು, KSCA ವಿಚಾರಲ್ಲಿ ನಿರ್ಲಕ್ಷ್ಯ ತೋರಿದೆ.

RELATED ARTICLES

Related Articles

TRENDING ARTICLES