Sunday, December 22, 2024

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

ಯಾದಗಿರಿ : ಸಾಲಭಾದೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಮ್ಮಾಪುರದಲ್ಲಿ ನಡೆದಿದೆ.

ಹನಮಪ್ಪ ಕಂಬಳಿ (55) ಆತ್ಮಹತ್ಯೆಗೆ ಶರಣಾಗಿರುವ ರೈತ. ಈತ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ವಿದ್ಯುತ್ ಟವರ್​ಗೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಮೃತ ಹನಮಪ್ಪ ಅವರು ತನ್ನ 6 ಎಕರೆ ಜಮೀನಿನ ಮೇಲೆ ಬ್ಯಾಂಕ್​​​​ನಲ್ಲಿ ಸಾಲ ಪಡೆದಿದ್ದರು. ಸಾಲವನ್ನು ತೀರಿಸಲಾಗದೇ ಹನಮಪ್ಪ ಆತ್ಮಹತ್ಯೆ ಶರಣಾಗಿದ್ದಾರೆ. ಈ ಸಂಬಂಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ, ಮನೆಗೆ ಆಧಾರವಾಗಿದ್ದ ಹನಮಪ್ಪನನ್ನು ಕಳೆದುಕೊಂಡಿರುವ ಇಡೀ ಕುಟುಂಬ ಅನಾಥವಾಗಿದೆ.

RELATED ARTICLES

Related Articles

TRENDING ARTICLES