ತುಮಕೂರು : 45 ವರ್ಷ ನಾನು ಸಂಪೂರ್ಣವಾಗಿ ಈ ಮಠದಲ್ಲಿ ತೊಡಗಿಸಿಕೊಂಡಿದ್ದೇನೆ. ಹತ್ತಾರು ಕಾರ್ಯಕ್ರಮ ಮಾಡಿದ್ದೇನೆ. ಪಾರ್ಟಿ ಗೀಟಿ ನಮ್ಮ ತಲೆಯಲ್ಲಿ ಇಲ್ಲ. ಕೆಲ ನಾಯಿ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಯಿತು ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳುವುದನ್ನೆಲ್ಲಾ 6 ತಾರೀಕಿನ ಬಳಿಕ ಹೇಳುತ್ತೇನೆ ಎಂದಿದ್ದೇನೆ. ಆಮೇಲೆ ಮಾತನಾಡುತ್ತೇನೆ, ಇಲ್ಲಿ ಬೇಡ ಎಂದು ತಿಳಿಸಿದ್ದಾರೆ.
ನಾನು ಯಾವತ್ತು ಅಧೈರ್ಯವಂತ ಆಗಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜೊತೆಗೆ ಸ್ನೇಹವಿದೆ. ನನ್ನ ಬಗ್ಗೆ ಹೇಳಿದ್ದಾರೆ, ಅದು ಅವರ ದೊಡ್ಡತನ. ನಾವೆಲ್ಲಾ 50 ವರ್ಷದ ಸ್ನೇಹಿತರು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ, ಆಗಲೇ ಗಂಗಾರಪ್ಪನವರು ನಮ್ಮ ಮನೆಗೆ ಬರ್ತಿದ್ರು. ಗಂಗಾಧರಪ್ಪನವರಿಂದಲ್ಲೇ ಅವರ ಮಕ್ಕಳು ಪರಿಚಯವಾಗಿದ್ದು ಎಂದು ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.
ಕಾಲ ಬಂದಾಗ ಮಾತನಾಡೋಣ
ಸಿದ್ಧಗಂಗಾ ಮಠವನ್ನು ಬೇರೆ ಮಠದೊಂದಿಗೆ ಹೋಲಿಕೆ ಮಾಡೋದು ಸರಿಯಲ್ಲ. ಕಾಲ ಬಂದಾಗ ಮಾತನಾಡೋಣ. ರಾಜಕಾರಣ ಬೇರೆ, ವೈಯಕ್ತಿಕ ಬೇರೆ. ಮಠ ಭಗವಂತ ಇದ್ದಂತೆ, ಆ ಸನ್ನಿಧಾನಕ್ಕೆ ಬಂದಿದ್ದೇವೆ. ಕೊಡೋದು ಬಿಡೋದು ಅವನಿಗೆ ಬಿಟ್ಟಿದ್ದು. ನವೆಂಬರ್ 30ರಂದು ಹೈ ಕಮಾಂಡ್ ಟೈಮ್ ಕೊಟ್ಟಿತ್ತು. ಅವತ್ತು ನಾನು ಹೋಗಲಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.