Monday, December 23, 2024

ಬಿಜೆಪಿಯವರು ಉತ್ತರ ಕರ್ನಾಟಕ ಭಾಗದ ವಿರೋಧಿಗಳು : ಸಿದ್ದರಾಮಯ್ಯ ಕಿಡಿ

ಬೆಂಗಳೂರು : ಇವರಿಗೆ ಉತ್ತರ ಕರ್ನಾಟಕ ಭಾಗದರ ಜನರ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದ ಜನರು ನೋಡ್ತಾ ಇದ್ದಾರೆ. ಪ್ರಚಾರಕ್ಕೋಸ್ಕರ ಇವರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಕೆ ತಯಾರು ಇಲ್ಲ. ಇವರು ಉತ್ತರ ಕರ್ನಾಟಕ ಭಾಗದ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇವ್ರು (ಬಿಜೆಪಿ) ಇದ್ದಾಗ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಮಾಡಿಲ್ಲ. ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡಿ ಎಂದು ಆಡಳಿತ ಪಕ್ಷದ ಸದಸ್ಯರ ಮೇಲೆಯೂ ಸಿದ್ದರಾಮಯ್ಯ ಗರಂ ಆದರು.

ನಾವು ಇದ್ದಾ ಚರ್ಚೆ ಮಾಡೋಣ ಅಂತಾ ಸದನ ಕರೆದಿದ್ದೇವೆ. ಇವ್ರು ಧರಣಿ ಮಾಡಿ ಉತ್ತರ ಕರ್ನಾಟಕ ಭಾಗದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ನಿಯಮಾವಳಿ ಬಿಟ್ಟು ನಾವು ಚರ್ಚೆ ಮಾಡಬೇಕಾ? ನಾವು ಸಮರ್ಥವಾಗಿ ಉತ್ತರ ಕೊಡ್ತೀವಿ. ನಿನ್ನೆಯಿಂದ ನಾನು ವಿರೋಧ ಪಕ್ಷದ ನಾಯಕರು ಚರ್ಚೆ ಮಾಡ್ತಾರೆ ಅಂತಾ ಬಂದು ಕೂತಿದ್ದೇನೆ. ಆದರೆ, ಇವರು ಚರ್ಚೆ ಮಾಡೋದು ಬಿಟ್ಟು, ಇಲ್ಲಿ ಧರಣಿ ಮಾಡೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಇಲ್ಲಿ ಕುಳಿತಿರುವುದು ಯಾಕೆ?

ನಾವು ಸರ್ಕಾರದ ಪರ ಉತ್ತರ ಕೊಡ್ತೇವೆ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಯಾಗಲಿ. ನಾವು ಚರ್ಚೆಗೆ ಮುಕ್ತವಾಗಿದ್ದೇವೆ. ಇವರು ಅದು ಬಿಟ್ಟು ಧರಣಿ ಮಾಡ್ತಿದ್ದಾರೆ ಸರಿಯಲ್ಲ. ನಿಯಮಾವಳಿಗಳನ್ನ ರಚನೆ ಮಾಡಿದವರು ಯಾರು? ನೊಟೀಸ್ ಕೊಟ್ಟ ಮೇಲೆ ಅವಕಾಶ ಕೊಟ್ಟಿದ್ದೇವೆ. ಸಮರ್ಥವಾದ ಉತ್ತರವನ್ನೇ ಕೊಡ್ತೇವೆ. ನಾನು ಇಲ್ಲಿ ಕುಳಿತಿರುವುದು ಯಾಕೆ? ವಿಪಕ್ಷ ನಾಯಕರು ಬರ ಚರ್ಚೆ ಮಾಡ್ತಾರೆಂದು. ಆದರೆ, ನೀವು ಧರಣಿ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

RELATED ARTICLES

Related Articles

TRENDING ARTICLES