Wednesday, January 15, 2025

ಪೃಥ್ವಿ ಸಿಂಗ್ ಮೇಲೆ ಚಾಕು ಇರಿತ : ಚನ್ನರಾಜ ಹಟ್ಟಿಹೊಳಿ, ಇಬ್ಬರು ಆಪ್ತರ ವಿರುದ್ಧ FIR

ಬೆಳಗಾವಿ : ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಚಾಕು ಇರಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮಿ ಹಬ್ಬಾಳ್ಕರ್ ಸಹೋದರ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಅವರ ಇಬ್ಬರು ಆಪ್ತರು ಹಾಗೂ ಇಬ್ಬರು ಗನ್‌ಮ್ಯಾನ್‌ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 1860 (U/s 143, 147, 148, 323, 324, 379, 504, 506), ಅಟ್ರಾಸಿಟಿ ಕೇಸ್, ಐಪಿಸಿ ಸೆಕ್ಷನ್ 1989 (u/s-3(1), (r)(s), 3(2)(v-a), IPC 1860(u/s-149 ರಡಿ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲೆ ನಿನ್ನೆ (ಸೋಮವಾರ) ಚಾಕುವಿನಿಂದ ಇರಿಯಲಾಗಿತ್ತು. 18 ಗಂಟೆಗಳ ಬಳಿಕ, ಇಂದು ಮಧ್ಯಾಹ್ನ ಆರೋಪಿಗಳ ವಿರುದ್ಧ ಪೃಥ್ವಿ ಸಿಂಗ್ ಪುತ್ರ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.

ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಆಪ್ತ ಸುಜಿತ್ ಜಾಧವ್, ಸದ್ದಾಂ, ಚನ್ನರಾಜ ಹಟ್ಟಿಹೊಳಿಯ ಇಬ್ಬರು ಗನ್‌ಮ್ಯಾನ್‌ಗಳ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಪೃಥ್ವಿ ಸಿಂಗ್ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES