Sunday, December 22, 2024

ಚಂಡಮಾರುತಕ್ಕೆ ಸಿಲುಕಿದ್ದ ಬಾಲಿವುಡ್ ನಟ ಅಮೀರ್ ಖಾನ್ ರಕ್ಷಣೆ!

ಚೆನ್ನೈ: ಮೈಚುಂಗ್​ ಚಂಡಮಾರುತದ ಹಿನ್ನೆಲೆ ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಮಿಳು ನಟ ವಿಶಾಲ್ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.

ಈ ಕುರಿತು ನಟ ವಿಶಾಲ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದರು. ತಕ್ಷಣ ಸಹಾಯಕ್ಕೆ ಧಾವಿಸಿ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ವಿಶಾಲ್. ರಕ್ಷಣಾ ಕಾರ್ಯಾಚರಣೆಯ ಪೋಟೊ ಹಂಚಿಕೊಂಡಿದ್ದು, ಅದರಲ್ಲಿ ವಿಶಾಲ್ ಸೇರಿದಂತೆ ಅಮೀರ್ ಖಾನ್, ಜ್ವಾಲಾ ಗುಟ್ಟಾ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಸ್ರೋ ಮತ್ತೆ ಇಡೀ ಜಗತ್ತನ್ನೇ ತನ್ನ ಸಾಹಸದಿಂದ ಅಚ್ಚರಿಗೊಳಿಸಿದೆ!

ಇನ್ನು,  ಬಾಲಿವುಡ್ ನಟ ಅಮೀರ್ ಖಾನ್​ ತಮ್ಮ ತಾಯಿಯ ಚಿಕಿತ್ಸೆಗೆಂದು ಚನ್ನೈನಲ್ಲಿ ಕೆಲವು ತಿಂಗಳುಗಳ ಹಿಂದೆ ವಾಸ್ತವ್ಯ ಹೂಡಿದ್ದರು, ಈ ನಡುವೆ ನಟ ವಿಶಾಲ್​ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಚಂಡಮಾಡುತದಿಂದ ಬಿಡದೇ ಮಳೆ ಸುರಿದ ಪರಿಣಾಮ ಅವರಿರುವ ಪ್ರದೇಶ ಜಲಾವೃತಗೊಂಡು ಮನೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು.

RELATED ARTICLES

Related Articles

TRENDING ARTICLES