Monday, December 23, 2024

ಯಾದಗಿರಿ ನಗರಸಭೆಯ 8 ಅಧಿಕಾರಿಗಳು ಅಮಾನತು!

ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ ಪ್ರಕರಣ ಸಂಬಂಧ 8 ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ಯಾದಗಿರಿ ನಗರಸಭೆ ಅಧಿಕಾರಿಗಳು ಸರ್ಕಾರಿ ಆಸ್ತಿಯನ್ನ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದರು. ಯಾದಗಿರಿ ನಗರಸಭೆ 391 ಸರ್ವೆ ನಂಬರ್​ನಲ್ಲಿ ಅಕ್ರಮವೆಸಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದರು. ರಿಯಲ್​ ಎಸ್ಟೇಟ್​​ ಉದ್ಯಮಿಗಳ ಜೊತೆ ಕೈ ಜೋಡಿಸಿ ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳು ಕಳ್ಳಾಟವಾಡಿದ್ದರು.

ಇದನ್ನೂ ಓದಿ: ಮೈಚಾಂಗ್ ಚಂಡಮಾರುತ ಎಫೆಕ್ಟ್​ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ!

ನಕಲಿ ದಾಖಲೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಯಾದಗಿರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತನಿಖೆಗೆ ತಂಡ ರಚನೆ ಮಾಡಿತ್ತು. ಇದೀಗ 8 ಜನ ಅಧಿಕಾರಿಗಳನ್ನ ಅಮಾನತು ಮಾಡಿ ಪೌರಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಪೌರಾಯುಕ್ತ ಶರಣಪ್ಪ, ಕಂದಾಯ ಅಧಿಕಾರಿ ವಿಶ್ವಪ್ರತಾಪ ಅಲೆಕ್ಸಾಂಡರ್, AEE ರಾಕೇಶ್​​​​ ರಡ್ಡಿ, ಸಿಬ್ಬಂದಿಗಳಾದ ಸುರೇಶ ವಿಭೂತೆ, ಪದ್ಮಾವತಿ, ರಿಯಾಜುದ್ದೀನ್, ಲಿಂಗಾರಡ್ಡಿ ಹಾಗೂ ಪುಷ್ಪಾವತಿ ಅಮಾನತಾದ ಅಧಿಕಾರಿಗಳು.

RELATED ARTICLES

Related Articles

TRENDING ARTICLES