Tuesday, May 13, 2025

ಬನಶಂಕರಿ ದೇಗುಲದ ಹುಂಡಿ ಎಣಿಕೆ : 5 ಸೌದಿ ಕರೆನ್ಸಿ, 129 ಅಮೆರಿಕನ್ ಡಾಲರ್ ಪತ್ತೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿ ಹಣ ಏಣಿಕೆ ಮಾಡಲಾಗಿದೆ. ಹುಂಡಿ ತುಂಬಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ನಿನ್ನೆ ಹುಂಡಿ ಓಪನ್ ಮಾಡಿದೆ.

ನಿನ್ನೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಓಪನ್ ಮಾಡಲಾಗಿದೆ. ಕಳೆದ ತಿಂಗಳು ಹುಂಡಿ ಓಪನ್ ಮಾಡಲಾಗಿತ್ತು. ಅಕ್ಟೊಬರ್ ತಿಂಗಳಿನಲ್ಲಿ‌ 41.53 ಲಕ್ಷ ಹಣ ಸಂಗ್ರಹವಾಗಿತ್ತು. ನವೆಂಬರ್ ತಿಂಗಳೊಂದರಲ್ಲೇ 45 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಭಕ್ತಾಧಿಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಹುಂಡಿ ಹಣದಲ್ಲಿಯೂ ಹೆಚ್ಚಳವಾಗಿದೆ.

129 ಅಮೆರಿಕನ್ ಡಾಲರ್ ಪತ್ತೆ

4.18 ಲಕ್ಷ ಮೌಲ್ಯದ 81.5 ಗ್ರಾಂ ಚಿನ್ನ ಹಾಗೂ 88 ಸಾವಿರ ಬೆಲೆ 1.8 ಕೆಜಿ ಬೆಳ್ಳಿ ಸಹ ಭಕ್ತರು ಬನಶಂಕರಿ ಅಮ್ಮನವರಿಗೆ ಅರ್ಪಣೆ ಮಾಡಿದ್ದಾರೆ. ಐದು ಸೌದಿ ಅರೇಬಿಯಾದ ದೀನಾರ್ ಕರೆನ್ಸಿ ಹಾಗೂ 129 ಅಮೆರಿಕನ್ ಡಾಲರ್ ಸಹ ಹುಂಡಿಯಲ್ಲಿ ದೊರಕಿರುವ ಬಗ್ಗೆ ಮೂಲ ‌ಮಾಹಿತಿ ಸಿಕ್ಕಿದೆ.

RELATED ARTICLES

Related Articles

TRENDING ARTICLES