Wednesday, January 22, 2025

Yash19: ದಿ ವೆಯ್ಟ್ ಈಸ್ ಓವರ್..ಯಶ್-19 ಲೋಡಿಂಗ್..!

Yash 19 Announcement: ದಿ ವೆಯ್ಟ್ ಈಸ್ ಓವರ್.. ಎಲ್ರೂ ಕಾತರದಿಂದ ಕಾಯ್ತಿದ್ದ ಯಶ್ 19ನೇ ಸಿನಿಮಾದ ಟೈಟಲ್ ಲಾಂಚ್​ಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕೆಜಿಎಫ್ ಚಾಪ್ಟರ್-2 ನಂತ್ರ ಬರೋಬ್ಬರಿ ಒಂದೂವರೆ ವರ್ಷ ಬ್ರೇಕ್ ಪಡೆದ ರಾಕಿಭಾಯ್, ಇದೀಗ ನ್ಯೂ ವೆಂಚರ್ ನ್ಯೂ ಸ್ಟೆಪ್​ಗೆ ಡೇಟ್ ಫಿಕ್ಸ್ ಮಾಡಿದ್ದಾರೆ.

ಸಾಮಾನ್ಯವಾಗಿ ಮನೆ ಕಟ್ಟೋಕೆ ಅಂದ್ರೇನೇ ದೊಡ್ಡ ಕಾಲಾವಕಾಶ ಬೇಕು. ಅಂಥದ್ರಲ್ಲಿ ಅರಮನೆ ಕಟ್ಟೋಕೆ ಅದಕ್ಕಿಂತ ಹೆಚ್ಚಿನ ಸಮಯ ಬೇಕು ಅನ್ನೋ ಮಾತನ್ನ ಯಶ್ ಈ ಹಿಂದೆ ಕೆಜಿಎಫ್ ಸಿನಿಮಾ ಟೈಮಲ್ಲೇ ಹೇಳಿದ್ರು. ಅದ್ರಂತೆ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡೋ ಅಂತಹ ಕೆಜಿಎಫ್ ಸಿನಿಮಾನ ಒಂದಲ್ಲಾ ಎರಡೆರಡು ಭಾಗಗಳಲ್ಲಿ ನೀಡಿದ್ರು. ಇಡೀ ವಿಶ್ವ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡೋ ಹಾಗೆ ಮಾಡಿದ್ದರು.

ಕೆಜಿಎಫ್ ಚಾಪ್ಟರ್-2 ತೆರೆಕಂಡು ಒಂದೂವರೆ ವರ್ಷ ಕಳೆಯಿತು. ಆದ್ರೆ ಯಶ್ ತಮ್ಮ ಮುಂದಿನ 19ನೇ ಸಿನಿಮಾನ ಮಾತ್ರ ಅನೌನ್ಸ್ ಮಾಡಲೇ ಇಲ್ಲ. ಆದ್ರೆ ಅದಕ್ಕಾಗಿ ಅವ್ರ ತಯಾರಿ ಮಾತ್ರ ಬಹಳ ದೊಡ್ಡದಾಗಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ. ಯೆಸ್.. ದಸರಾ ಹಬ್ಬದಿಂದ ಹಿಡಿದು, ದೀಪಾವಳಿವರೆಗೂ ಆ ಹಬ್ಬಕ್ಕೆ ಅನೌನ್ಸ್ ಮಾಡ್ತಾರೆ ಈ ಹಬ್ಬಕ್ಕೆ ಮಾಡ್ತಾರೆ ಅಂತ ಸುದ್ದಿ ಆಗಿದ್ದೇ ಆಗಿದ್ದು. ಆದ್ರೆ ರಾಕಿಭಾಯ್ ಮಾತ್ರ ರೀಸೆಂಟ್ ಆಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಡಿಪಿ ಹಾಗೂ ಕವರ್ ಫೋಟೋಗಳನ್ನ ಲೋಡಿಂಗ್ ಅಂತ ಬದಲಾಯಿಸಿದ್ಧಾರೆ.

ಇದನ್ನೂ ಓದಿ: ಅನಿಮಲ್​ ಮೂವಿ ​:​ ರಣಬೀರ್-ರಶ್ಮಿಕಾ  ರೊಮ್ಯಾನ್ಸ್ ನೋಡಿ ಆಲಿಯಾ ಗರಂ!

ಅಂದಹಾಗೆ ಲೋಡಿಂಗ್ ಅಂದ್ರೆ ಅವ್ರ ನೆಕ್ಸ್ಟ್ ವೆಂಚರ್ ಲೋಡ್ ಆಗ್ತಿದೆ ಅನ್ನೋದು ಅದರ ಸೂಚಕವಾಗಿತ್ತು. ಅದ್ರಂತೆ ಇಂದು ತಮ್ಮ 19ನೇ ಸಿನಿಮಾದ ಟೈಟಲ್ ಘೋಷಣೆ ಬಗ್ಗೆ ಸ್ವತಃ ಯಶ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ನೀಡಿದ್ದಾರೆ. ಅದರಂತೆ ಇದೇ ಡಿಸೆಂಬರ್ 8ರ ಬೆಳಗ್ಗೆ 9.55ಕ್ಕೆ ಯಶ್19 ಚಿತ್ರದ ಶೀರ್ಷಿಗೆ ಕೆವಿಎನ್ ಪ್ರೊಡಕ್ಷನ್ಸ್​​ ಮೂಲಕ ಅನೌನ್ಸ್ ಆಗಲಿದೆ ಎಂದಿದ್ದಾರೆ.

ಮಲಯಾಳಂನ ಡೈರೆಕ್ಟರ್ ಗೀತು ಮೋಹನ್​ದಾಸ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ಸ್, ಶ್ರೀಲಂಕಾದಲ್ಲಿ ಶೂಟಿಂಗ್ ಅನ್ನೋ ನಮ್ಮ ಊಹೆಗಳೆಲ್ಲಾ ಇದೀಗ ಪಕ್ಕಾ ಆಗ್ತಿವೆ. ಈಗಾಗ್ಲೆ ಯಶ್ ಲಂಡನ್​ನಲ್ಲಿ ಬೀಡುಬಿಟ್ಟು, ಹಾಲಿವುಡ್ ತಂತ್ರಜ್ಞರ ಜೊತೆ ಒಂದಷ್ಟು ಸ್ಟಂಟ್ಸ್ ಪ್ರಾಕ್ಟೀಸ್ ಮಾಡಿದ್ರು. ಶ್ರೀಲಂಕಾಗೆ ತೆರಳಿ ಲೊಕೇಷನ್ಸ್ ಫೈನಲ್ ಮಾಡಿದ್ರು. ಅದ್ರಂತೆ ಅಟೆನ್ಷನ್ ಪ್ಲೀಸ್.. ಬಂದಾ ಮಾಸ್ಟರ್​ಪೀಸ್ ಅಂತ ಮಗದೊಮ್ಮೆ ಹೇಳೋಕೆ ಸಜ್ಜಾಗಿದ್ದಾರೆ ಯಶ್.

ಒಟ್ಟಾರೆ ಯಶ್ ಡಿಸೆಂಬರ್ 8ಕ್ಕೆ ತಮ್ಮ ಹೊಸ ಸಿನಿಮಾದ ಅನೌನ್ಸ್ ಮಾಡ್ತಿರೋ ಸುದ್ದಿಇಡೀ ಭಾರತೀಯ ಚಿತ್ರರಂಗದ ಪಾಲಿಗೆ ಗುಡ್ ನ್ಯೂಸ್ ಆಗಿದೆ. ಅವ್ರ ಅಭಿಮಾನಿಗಳಿಗಂತೂ ರಾಕಿಂಗ್​ ಹಾಗೂ ಬ್ರೇಕಿಂಗ್ ನ್ಯೂಸ್ ಆಗಿ ಪರಿಣಮಿಸಿದೆ. ಅದೇನೇ ಇರಲಿ, ಅಧಿಕೃತ ಘೋಷಣೆ ಬಳಿಕ ಆಷ್ಟು ಬೇಗ ಸಿನಿಮಾ ಕಂಪ್ಲೀಟ್ ಆಗಲಿ, ಬೆಳ್ಳಿಪರದೆ ಬೆಳಗುವಂತಾಗಲಿ ಅನ್ನೋದು ನಮ್ಮ ಆಶಯ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES