Monday, December 23, 2024

ಈ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ : ಆರ್. ಅಶೋಕ್

ಬೆಳಗಾವಿ : ಈ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ. ಇನ್ನೇನಿದ್ದರೂ ಮೋದಿ ಕಾಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಭಾರತ ವಿಶ್ವಗುರುವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಕಾಂಗ್ರೆಸ್​ ವಿರುದ್ಧ ವಿಪಕ್ಷ ನಾಯಕ ಆರ್. ಅಶೊಕ್ ಗುಡುಗಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ತೆಲಂಗಾಣ ಗೆಲುವಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಸೋತಿರುವ ಬಗ್ಗೆ ಮಾತನಾಡುತ್ತಿಲ್ಲ. ಬಿಆರ್​ಎಸ್ ಸೋಲಲು ಅಲ್ಲಿನ ಸಿಎಂ ರೆಸಾರ್ಟ್ ನಲ್ಲಿದ್ದು ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕಾರಣಕ್ಕೆ ಸೋತಿದೆ ಎಂದು ಹೇಳಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶ ಸೆಮಿ ಫೈನಲ್ ಅಂತ ಹೇಳಿದ್ದರು. ಲೋಕಸಭಾ ಚುನಾವಣೆ ಫೈನಲ್ ಅಂತ ಹೇಳಿದ್ದರು. ಅವರು ತೆಲಂಗಾಣ ಗೆದ್ದಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಜನರು ಬಿಆರ್​ಎಸ್ ಪಾರ್ಟಿ ವಿರುದ್ಧ ಇದ್ದರು. ಬಿಆರ್​ಎಸ್‌ನ ರೆಸಾರ್ಟ್ ರಾಜಕಾರಣ ಅವರನ್ನು ಸೋಲಿಸಿದೆ, ಹಾಗಾಗಿ, ಕಾಂಗ್ರೆಸ್ ಅಲ್ಲಿ ಗೆದ್ದಿದೆ ಎಂದು ವ್ಯಾಖ್ಯಾನಿಸಿದರು.

ಮೋದಿ‌ ಅಧಿಕಾರ ಇದ್ದರೆ ದೇಶ ಸುಭದ್ರ

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ, ಜನರಿಗೆ ಗೊತ್ತಾಗಿದೆ. ಪ್ರಧಾನಿ ಮೋದಿ‌ ನೇತೃತ್ವದಲ್ಲಿ ಅಧಿಕಾರ ಇದ್ದರೆ ದೇಶ ಸುಭದ್ರ, ಮೋದಿ ಜೊತೆ ಹೋದರೆ ಧರ್ಮ ಸುಭದ್ರ, ಮೋದಿ ಜೊತೆ ಹೋದರೆ ದೇಶ ಅಭಿವೃದ್ಧಿ ಪಥದಲ್ಲಿ ಇರುತ್ತದೆ ಎಂದು ಎಂದು‌ ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES