Monday, December 23, 2024

ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಚಳಿಗಾಲ ಬಂತು ಅಂದ್ರೆ ಸಾಕು ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ.ನಾವು ಈ ಸೀಸನ್​ನಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿವಹಿದರೂ ಸಾಲದ್ದು,ಆದ್ದರಿಂದ ನಾವು ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ನಾವು ಸೀಸನ್​ನಲ್ಲಿ ಯಾವ ಹಣ್ಣುಗಳು,ತರಕಾರಿಗಳನ್ನು ಸೇವಿಸಬೇಕು ಎಂದು ಗೊಂದಲವಂತೂ ಇದ್ದೇ ಇರತ್ತೆ. ಅದಕೆಲ್ಲಾ ಉತ್ತರ ಇಲ್ಲಿದೆ ಮುಂದೆ ಓದಿ..

ತರಕಾರಿಗಳಿಗೆ ಬೀಟ್ರೂಟ್ ಬಾಸ್ ಇದ್ದಂತೆ ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಈ ತರಕಾರಿಯಲ್ಲಿ ಸಿಗುತ್ತದೆ. ಆದ್ದರಿಂದ ನಾವು ಈ ಕಾಲದಲ್ಲಿ ಬೀಟ್ರೂಟ್ ತಿನ್ನುವುದರಿಂದ ನಮ್ಮ ಆರೋಗ್ಯ ಅನೇಕ ಪ್ರಯೋಜಗಳಿವೆ.

ಪ್ರಮುಖವಾಗಿ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು, ನೈಟ್ರೇಟ್ ಅಂಶಗಳು, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಕಬ್ಬಿಣಾಂಶ, ಕ್ಯಾಲ್ಸಿಯಂ,ತಾಮ್ರ ಹಾಗೂ ಇತರ ಖನಿಜಾಂಶಗಳು ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

  • ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡಿ ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ನೆರವಿಗೆ ಬರುತ್ತದೆ.
  • ಚರ್ಮದ ಸೌದರ್ಯಕ್ಕೆ ರಾಮಬಾಣವಿದ್ದಂತೆ.
  • ರಕ್ತದೊತ್ತಡವನ್ನು ನಿಯಮತ್ರಿಸಲು ಸಹಕಾರಿ
  • ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕ
  • ರಕ್ತಹೀನತೆ ಸಮಸ್ಯೆಯಿಂದ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ.
  • ರಕ್ತ ಸಂಚಾರ ಸುಗಮವಾಗಿ ಕಾರ್ಯನಿರ್ವಹಿಸುಲು ಸಹಾಯಕವಾಗುತ್ತದೆ.

ನಾವು ನಿತ್ಯ ಒಂದು ಲೋಟ ಬೀಟ್ರೂಟ್ ಜ್ಯೂಸ್​ ಕುಡಿಯುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ.

RELATED ARTICLES

Related Articles

TRENDING ARTICLES