Tuesday, January 28, 2025

ಉಸಿರು ನಿಲ್ಲಿಸಿದ ‘ಗಜ’ರಾಜ : ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು

ಹಾಸನ : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದೆ. ಅರ್ಜುನನ ಸಾವಿನ‌ ವಿಷಯ ತಿಳಿದ ಮಾವುತ ವಿನೋದ್ ಕಣ್ಣೀರಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಡಿಎಫ್ ಓ ಮೋಹನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ನಮ್ಮ‌ಮೇಲಾಧಿಕಾರಿಗಳ‌ ಗಮನಕ್ಕೆ ತಂದಿದ್ದೇವೆ. ಮುಂದಿನ ಕ್ರಮದ ಬಗ್ಗೆಯೂ ಸೂಚನೆ ಬಂದ ತಕ್ಷಣ ನಿರ್ವಹಿಸುತ್ತೇವೆ. ಮೃತಪಟ್ಟಿರುವ ಅರ್ಜುನನ ಬಳಿಗೆ ನಾವು ಹೋಗೋದಕ್ಕೆ ಆಗ್ತಿಲ್ಲ. ಅದರ ಸುತ್ತಮುತ್ತಲಲ್ಲೇ ಕಾಡಾನೆಗಳ ಓಡಾಡ್ತಿವೆ ಎಂದು ಹೇಳಿದ್ದಾರೆ.

ಕಾಡಾನೆ‌ಸೆರೆ ಹಿಡಿಯೋ ಕಾರ್ಯಾಚರಣೆ ಯಸಳೂರು ವಲಯದಲ್ಲಿ ನಡೆಯುತ್ತಿತ್ತು. ನೆಡುತೋಪಿನಲ್ಲಿ ಬೆಳಗ್ಗೆಯಿಂದಲೇ ಕಾಡಾನೆಗಳನ್ನ ಗುರುತಿಸಿ ಅದನ್ನ ನಿಗಾವಹಿಸುತ್ತಿದ್ದರು. ಕಾಡಾನೆಗಳು ಇರುವ ಸ್ಥಳಕ್ಕೆ ಹೋದಾಗ 12 ಆನೆಗಳು ಇದ್ದವು. ಗುಂಪನ್ನ ಗಂಡಾನೆಯೊಂದು ಲೀಡ್ ಮಾಡ್ತಾ ಇತ್ತು. ನಮ್ಮ ಸಾಕಾನೆಗಳು ಹೋದಾಗ ಚಾರ್ಜ್ ಮಾಡೋದಕ್ಕೆ ಬಂತು ಎಂದು ತಿಳಿಸಿದ್ದಾರೆ.

ಕಾದಾಟದಲ್ಲಿ ಅರ್ಜುನ ಸಾವನ್ನಪ್ಪಿದೆ

ಡಾಕ್ಟರ್ ಗಂಡಾನೆ ಮತ್ತನಲ್ಲಿರೋದನ್ನ ಗಮನಿಸಿದ್ದಾರೆ. ನಮ್ಮ ಅರ್ಜುನ ಆನೆ ಕೂಡಾ ಮತ್ತಿನಲ್ಲಿತ್ತು. ಉಳಿದು ಆನೆಗಳೆಲ್ಲಾ ವಾಪಸ್ಸು ಆಗಿದ್ದವು. ಆದ್ರೆ, ಕಾಡಾನೆ ನಮ್ಮ‌ಅರ್ಜುನನ ಮೇಲೆ ಅಟ್ಯಾಕ್ ಮಾಡಿತು. ಆ ಆನೆಗೆ ಡಾಟ್ ಸಹ ಮಾಡಿದ್ರು. ಅಟ್ಯಾಕ್ ಮಾಡಿದ ಕೂಡಲೇ ನಮ್ಮ ಸಿಬ್ಬಂದಿಗಳು, ಸಾಕಾನೆಗಳು ವಾಪಸ್ಸು ಬಂದವು. ಅದರ ಮೇಲಿದ್ದ ಡಾಕ್ಟರ್ ಹಾಗೂ ಮಾವುತ ಕೂಡಾ ಇಳಿದು ಬಂದ್ರು. ಕಾಡಾನೆ ಸ್ವಲ್ಪ ಬಲಿಷ್ಟವಾಗಿತ್ತು. ಅಲ್ಲದೇ ಕೋರೆಗಳು ಚೂಪಾಗಿದ್ದವು. ಈ ಕಾದಾಟದಲ್ಲಿ ಅರ್ಜುನ ಸಾವನ್ನಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES