Wednesday, January 8, 2025

‘ಕಾಟೇರ’ ಚಿತ್ರದ ಮೊದಲ ಸಾಂಗ್ ‘ಪಸಂದಗವನೆ’ ರಿಲೀಸ್ : ಶುರುವಾಯ್ತು ‘ಡಿ ಬಾಸ್’ ನ್ಯೂ ಸಾಂಗ್ ಜ್ವರ

ಬೆಂಗಳೂರು : ನಟ ದರ್ಶನ್ ತೂಗುದೀಪ ಅಭಿನಯದ ಈ ವರ್ಷದ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಮೊದಲ ಹಾಡು ‘ಪಸಂದಾಗವನೆ’ ಇಂದು ಬಿಡುಗಡೆಯಾಗಿದೆ.

ದರ್ಶನ್ ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿರುವ ಕಾಟೇರ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ಚಿತ್ರದ ಸ್ಯಾಂಪಲ್ಸ್ ಕೂಡ ಒಂದೊಂದೇ ರಿವೀಲ್ ಆಗ್ತಿವೆ. ಸದ್ಯ ಕಾಟೇರ ಚಿತ್ರದ ಮೊದಲ ಹಾಡು ರಿಲೀಸ್​ ಆಗಿದ್ದು, ಜವಾರಿ ಸ್ಟೈಲ್ ಸಾಂಗ್​ನಲ್ಲಿ ಡಿ ಬಾಸ್ ಪ್ರೇಮಾರಾಧನೆಯಲ್ಲಿ ಆರಾಧನಾ ಮಿಂಚಿದ್ದಾರೆ.

  • ಪಸಂದಾಗವ್ನೆ ಕಾಟೇರ.. ಡಿ ಬಾಸ್ ನ್ಯೂ ಸಾಂಗ್ ಜ್ವರ
  • ಜವಾರಿ ಸ್ಟೈಲ್ ಸಾಂಗ್.. ಇದು ದಚ್ಚು ಪ್ರೇಮದ ಆರಾಧನೆ
  • ಚೇತನ್ ಲೈನ್ಸ್.. ಮಂಗ್ಲಿ ವಾಯ್ಸ್.. ಹರಿಕೃಷ್ಣ ಟ್ಯೂನ್..!
  • ಡಿಸೆಂಬರ್ 29ಕ್ಕೆ ವಿಶ್ವದಾದ್ಯಂತ ಕಾಟೇರನ ದರ್ಶನ ಫಿಕ್ಸ್

‘ಕಾಟೇರ’ ಶುರುವಾದಾಗಿನಿಂದ ಸಖತ್ ಸುದ್ದಿಯಲ್ಲಿರುವ ಚಿತ್ರವಿದು. 80ರ ದಶಕದ ಬ್ಯಾಕ್​​ಡ್ರಾಪ್ ಎನ್ನುವುದು ಬಿಟ್ಟರೆ ಸಿನಿಮಾದ ಬೇರೆ ಡಿಟೈಲ್ಸ್ ಮಾತ್ರ ರಿವೀಲ್ ಆಗಿರಲಿಲ್ಲ. ಆದ್ರೆ, ಇತ್ತೀಚೆಗೆ ಸಿನಿಮಾದ ರಿಲೀಸ್ ಡೇಟ್ ಸಮೇತ ಒಂದು ಮೇಕಿಂಗ್ ವಿಡಿಯೋನ ರಿವೀಲ್ ಮಾಡಿತ್ತು ಚಿತ್ರತಂಡ. ಇದೇ ಡಿಸೆಂಬರ್ 29ಕ್ಕೆ ಚಿತ್ರಮಂದಿರಗಳಲ್ಲಿ ಕಾಟೇರನ ದರ್ಶನ ಪಕ್ಕಾ ​ಆಗಿದೆ.

ನಟ ದರ್ಶನ್ ರಾಬರ್ಟ್​ ಬಳಿಕ ಮತ್ತದೇ ನಿರ್ದೇಶಕರ ಜೊತೆಯಲ್ಲಿ ಮಾಡಿರುವ ಸಿನಿಮಾ ಇದಾಗಿದ್ದು, ಸಹಜವಾಗಿಯೇ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಮೂಡಿದೆ. ತರುಣ್ ಸುಧೀರ್ ನಿರ್ದೇಶನ ಹಾಗೂ ರಾಕ್​ಲೈನ್ ಪ್ರೊಡಕ್ಷನ್ಸ್ ಅಂತಹ ದೊಡ್ಡ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಚಿತ್ರವಿದು. ಇನ್ನೂ, ದರ್ಶನ್​ಗೆ ಜೋಡಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಮೇಕಿಂಗ್ ಟೀಸರ್ ಬಳಿಕ ರಿಲೀಸ್ ದಿನಾಂಕ ಹತ್ತಿರ ಆಗ್ತಿದ್ದಂತೆ, ಚಿತ್ರತಂಡ ಪ್ರೊಮೋಷನ್ ಕೆಲಸಕ್ಕೆ ಚುರುಕು ನೀಡಿದೆ. ಅದರಂತೆ ಇದೀಗ ಚಿತ್ರದ ಫಸ್ಟ್ ಸಾಂಗ್ ಹೊರಬಿದ್ದಿದೆ. ಪಸಂದಾಗವ್ನೆ ಎಂಬ ಈ ಹಾಡು ಜವಾರಿ ಸ್ಟೈಲ್​ನಲ್ಲಿ ಎಲ್ಲರ ದಿಲ್ ದೋಚುತ್ತಿದೆ. ದರ್ಶನ್​ಗೆ ನಾಯಕನಟಿ ತನ್ನ ಪ್ರೇಮ ನಿವೇದನೆ ಮಾಡುವಂತಹ ಹಾಡು ಇದಾಗಿದ್ದು, ಪ್ರೇಮಾರಾಧನೆಯ ಗೀತೆ ಎಂದರೆ ತಪ್ಪಾಗಲ್ಲ.

ಚೇತನ್ ಲೈನ್ಸ್.. ಮಂಗ್ಲಿ ವಾಯ್ಸ್.. ಹರಿಕೃಷ್ಣ ಟ್ಯೂನ್..!

ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯವಿರುವ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತ ಹಾಗೂ ಮಂಗ್ಲಿ ಅವರ ಗಾಯನವಿದೆ. ಅಂದಹಾಗೆ ರಾಬರ್ಟ್​ ಚಿತ್ರದ ಕಣ್ಣು ಹೊಡೆಯಾಕ ಸಾಂಗ್ ಮಂಗ್ಲಿ ಹಾಡಿದ್ದರು. ಇದೀಗ ಕಾಟೇರ ಚಿತ್ರಕ್ಕೂ ಅವರ ವಾಯ್ಸ್ ಬಿದ್ದಿರೋದು ಹಾಡಿನ ಗಮ್ಮತ್ತು ಹೆಚ್ಚಿಸಿದಂತಿದೆ. ಇನ್ನು ದರ್ಶನ್ ಕಾಸ್ಟ್ಯೂಮ್ಸ್, ಚಿತ್ರಿಸಿರುವ ಲೊಕೇಷನ್ಸ್, ಆರಾಧನಾ ಅಟ್ಟೈರ್, ಸ್ಟೆಪ್ಸ್ ಎಲ್ಲಾ ನೋಡ್ತಿದ್ರೆ ಪಕ್ಕಾ ನಾಟಿ ಸ್ಟೈಲ್​​ನಲ್ಲಿ ಕಿಕ್ ಕೊಡ್ತಿದೆ. ಹಲವೆಡೆ ತಾಯಿ ಮಾಲಾಶ್ರೀಯನ್ನ ನೆನಪಿಸ್ತಾರೆ ಆರಾಧನಾ. ಇನ್ನೂ, ಸುಧಾಕರ್ ರಾಜ್ ಕ್ಯಾಮೆರಾ ಕೈಚಳಕ ಇಂಪ್ರೆಸ್ಸೀವ್ ಆಗಿದೆ.

ಒಟ್ಟಾರೆ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟ ದರ್ಶನ್ ಈ ಸಿನಿಮಾದಿಂದ ಮತ್ತೊಮ್ಮೆ ತನ್ನ ನಂಬಿದವರ ಕಾಯುವ ಒಡೆಯನಾಗಿ ಮಿಂಚು ಹರಿಸಲಿದ್ದಾರೆ. ಇನ್ನು ಬಾಕ್ಸ್ ಆಫೀಸ್​​ನಲ್ಲಿ ಈ ಬಾಕ್ಸ್ ಆಫೀಸ್ ಸುಲ್ತಾನ ಎಷ್ಟು ಕೋಟಿ ಲೂಟಿ ಮಾಡ್ತಾನೆ ಎನ್ನುವುದನ್ನು ಕಾದುನೋಡಬೇಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES