Sunday, January 19, 2025

‘ಅರ್ಜುನ’ನ ಸಾವಿಗೆ ಕಂಬನಿ ಮಿಡಿದ ಪ್ರಾಣಿ ಪ್ರಿಯ ‘ಡಿ ಬಾಸ್’ ದರ್ಶನ್

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ‘ಅರ್ಜುನ’ ಆನೆ ಸಾವಿಗೆ ಪ್ರಾಣಿ ಪ್ರಿಯ ನಟ ದರ್ಶನ್ ಅವರು ಕಂಬನಿ ಮಿಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಅರ್ಜುನನ ‘ಗಜ’ ಗಾಂಭೀರ್ಯಕ್ಕೆ ಅವನೇ ಸಾಟ ಎಂದು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ಅರ್ಜುನನ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿರುವ ನಟ ದರ್ಶನ್, ‘8 ಬಾರಿ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜ ಗಾಂಭೀರ್ಯಕ್ಕೆ ಅವನೇ ಸಾಟಿ. ಓಂ ಶಾಂತಿ’ ಎಂದು ಬರೆದುಕೊಂಡಿದ್ದಾರೆ.

ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಬರೋಬ್ಬರಿ 750 ಕಿಲೋ ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ಮೈಸೂರಿನ ರಾಜಬೀದಿಗಳಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದ ಆನೆ ಅರ್ಜುನ ಕಾಡಾನೆ ದಾಳಿಯಿಂದ ಬಾರದ ಲೋಕದತ್ತ ಪಯಣ ಬೆಳೆಸಿದ್ದಾನೆ.

ಕಾಡಾನೆ ಜೊತೆ ‘ಅರ್ಜುನ’ ಕಾಳಗ

ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ತಿವಿದು ಕೊಂದಿದೆ. ಹಾಸನ ಜಿಲ್ಲೆ ಸಕಲೇಶಪುರ ಬಾಳೆಕೆರೆ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡಿದ್ದು, ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಆದರೆ, ಅರ್ಜುನ ಮಾತ್ರ ಕಾಳಗಕ್ಕಿಳಿದ್ದ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES