Thursday, January 23, 2025

ಭಾರತಕ್ಕೆ ರೋಚಕ ಜಯ : ಸರಣಿ ಗೆದ್ದು, ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಯಂಗ್ ಇಂಡಿಯಾ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯಂಗ್ ಇಂಡಿಯಾ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 161 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 154 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು 6 ರನ್​ ಗಳಿಂದ ಗೆಲ್ಲುವ ಮೂಲಕ ಭಾರತ 4-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.

ಆಸ್ಟ್ರೇಲಿಯಾ ಪರ ಬೆನ್ ಮೆಕ್‌ಡರ್ಮಾಟ್ ಅರ್ಧಶತಕ (54) ಸಿಡಿಸಿದರೂ ಪಂದ್ಯ ಗೆಲ್ಲಿಸಿಕೊಡುವಲ್ಲಿ ವಿಫಲರಾದರು. ಟ್ರಾವಿಸ್ ಹೆಡ್ 28, ನಾಯಕ ಮ್ಯಾಥ್ಯೂ ವೇಡ್ 22, ಟಿಮ್ ಡೇವಿಡ್ 17, ಮ್ಯಾಥ್ಯೂ ಶಾರ್ಟ್ 16 ರನ್ ಗಳಿಸಿದರು. ಭಾರತದ ಪರ ಮುಕೇಶ್ ಕುಮಾರ್ 3, ಅರ್ಶ್​ದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯಿ ತಲಾ 2, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಅಯ್ಯರ್, ಅಕ್ಷರ್ ಆಸರೆ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ 8 ವಿಕೆಟ್ ಕಳೆದುಕೊಂಡು 160 ರನ್​ ಗಳಿಸಿತು. ಭಾರತದ ಪರ ಶ್ರೇಯಸ್ ಅಯ್ಯರ್ ಅರ್ಧಶತಕ (53) ಸಿಡಿಸಿ ಮಿಂಚಿದರು. ಯಶಸ್ವಿ ಜೈಸ್ವಾಲ್ 21, ಅಕ್ಷರ್ ಪಟೇಲ್ 31 ಹಾಗೂ ಜಿತೇಶ್ ಶರ್ಮಾ 24 ಸಿಡಿಸಿದರು. ಆಸಿಸ್ ಪರ ಜೇಸನ್ ಬೆಹ್ರೆನ್‌ಡಾರ್ಫ್ 2, ಬೆನ್ ದ್ವಾರ್ಶುಯಿಸ್ 2, ತನ್ವೀರ್ ಸಂಘ ಹಾಗೂ ಆರನ್ ಹಾರ್ಡಿ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES