Tuesday, September 17, 2024

ಮುದ್ದಾದ ಶ್ವಾನಗಳ ಪ್ರದರ್ಶನ ನೋಡಲು ಮುಗಿಬಿದ್ದ ಬೆಂಗಳೂರಿಗರು

ಬೆಂಗಳೂರು : ಶ್ವಾನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಮ್ಮ ಶ್ವಾನಗಳಿಗೆ ಅಂತಾನೆ ಲಕ್ಷ ಲಕ್ಷ ಖರ್ಚು ಮಾಡುವುದಕ್ಕೂ ಸಿದ್ದ ಇರ್ತಾರೆ. ಇಂಥ ಶ್ವಾನ ಪ್ರಿಯರಿಗೆ ಸಿಲಿಕಾನ್ ಸಿಟಿಯಲ್ಲಿ ಡಾಗ್ ಷೋ ನಡೆಸಲಾಯಿತು.

ಒಂದೆಡೆ ನಾಯಿಗಳ ಜೊತೆ ಮಾಲೀಕರ ವಾಕಿಂಗ್. ಮತ್ತೊಂದೆಡೆ ಮುದ್ದು ಮುದ್ದು ಶ್ವಾನಗಳ ಜೊತೆ ಫೋಟೋಗೆ ಪೋಸ್ ನೀಡುತ್ತಿದ್ದ ಶ್ವಾನ ಪ್ರಿಯರು. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್ ಗ್ರೌಂಡ್​ನಲ್ಲಿ ಕಲರ್ ಫುಲ್ ಡಾಗ್ ಷೋ ಮಸ್ತಿ ಶುರುವಾಗಿದೆ.

ಸಿಲಿಕಾನ್ ಸಿಟಿ ಕೆನಲ್ ಕ್ಲಬ್ ಹಾಗೂ ಬೆಂಗಳೂರು ಕನೈನ್ ಕ್ಲಬ್ ಆಯೋಜಿಸಿದ ಡಾಗ್ ಷೋ ನಲ್ಲಿ ಸುಮಾರು 50 ತಳಿಯ 400 ರಿಂದ 500 ನಾಯಿಗಳ ಚಾಂಪಿಯನ್ ಶಿಫ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಬೆಂಗಳೂರಿಗರು ತಮ್ಮ ವಿವಿಧ ತಳಿಯ ಶ್ವಾನಗಳ ಜೊತೆ ಬಂದಿದ್ದರು.

ಗಮನ ಸೆಳೆದ ಚೌ ‌ಚೌ ನ್ಯೂ ಬ್ರಿಡ್

ಷೋಗೆ ಹಸ್ಕಿ, ಬೆಳ್ಳಿಯನ್ ಕೆಪರ್ಡ್ ನಾಯಿ, ಜರ್ಮನ್ ಶೆಪರ್ಡ್, ಡಾಬರ್‌ಮನ್, ಲ್ಯಾಬ್ರಡಾರ್‌, ರಿಟ್ರೈವರ್, ಸೈರಿಯಲ್, ಚುವಾವೋ, ರೊಡಿಷನ್ ರಿಜ್ ಬ್ಯಾಕ್, ಗೋಲ್ಡನ್‌ ಶಿಳ್ಳೆವರ್, ಬಾಕ್ಸರ್, ಗ್ರೇಟ್‌ಡೇನ್, ಕಾಕರ್ ಸೇರಿದಂತೆ ವಿಶೇಷ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿದ್ದವು. ಕೋರೆಹಲ್ಲು ತಳಿಯ ನಾಯಿಯ ಕುರಿತು ಇನ್ನಷ್ಟು ಜ್ಞಾನ ವೃದ್ಧಿಸಿಕೊಳ್ಳುವ ಹಾಗೂ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಇದಾಗಿತ್ತು. ಚೌ ಚೌ ನ್ಯೂ ಬ್ರಿಡ್ ಶ್ವಾನ ಎಲ್ಲರ ಗಮನ ಸೆಳೆಯಿತು.

ಮುಧೋಳ ನಾಯಿ ಪರಿಚಯಿಸಿದ ಕೀರ್ತಿ

ಪ್ರತಿ ವರ್ಷ ಸಂಸ್ಥೆ ಈ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ಮುಧೋಳ ನಾಯಿಯನ್ನು ಇದೇ ಸಂಸ್ಥೆ ತನ್ನ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪರಿಚಯಿಸಿತ್ತು. ನಂತರ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವಕ್ಕೆ ಪರಿಚಿತವಾಯಿತು. ಸೇನೆಯಲ್ಲಿ ಕೂಡ ಈ ತಳಿಯ ನಾಯಿಗಳು ಸೇವೆ ಸಲ್ಲಿಸುತ್ತಿವೆ. ಇನ್ನು ಈ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ ಫಾರ್ಮಾ ಕಂಪನಿಗಳು, ಅಂತರಾಷ್ಟ್ರೀಯ ಸೆಗ್ಮಂಟ್​ಗಳನ್ನು ಉತ್ಪಾದಕರು ಹಾಗೂ ಇತರೆ ಉತ್ಪನ್ನಗಳನ್ನು ವಿನ್ಯಾಸಪಡಿಸುವವರು ಕೂಡ ಇದ್ದರು. ಶ್ವಾನ ಹಾಗೂ ಇತರೆ ಸಾಕುಪ್ರಾಣಿಗಳ ಲೈಫ್ ಸ್ಟೈಲ್ ಹೆಚ್ಚಿಸುವ ಉತ್ಪನ್ನಗಳು ಶ್ವಾನ ಪ್ರಿಯರ ಗಮನ ಸೆಳೆದವು.

ಒಟ್ಟಾರೆ, ವಾರಪೂರ್ತಿ ಬ್ಯುಸಿ ಶೆಡ್ಯೂಲ್ ನಲ್ಲಿರುವ ಶ್ವಾನ ಪ್ರಿಯರಿಗೆ ಈ ಪೆಟ್ ಶೋ ಒಳ್ಳೆಯ ಜಾಗ ಆಗಿತ್ತು. ತಮ್ಮ ಶ್ವಾನಗಳ ಆಕ್ಟಿವಿಟಿಸ್ ನಲ್ಲಿ ಭಾಗಿಯಾಗಿದ್ದ ಶ್ವಾನ ಮಾಲೀಕರು ವೀಕೆಂಡ್ ನಲ್ಲಿ ಸಖತ್ ಎಂಜಾಯ್ ಮಾಡಿದರು.

  • ಸುಚಿತ್ರ, ಮೆಟ್ರೋ ಬ್ಯೂರೋ, ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES