Thursday, December 19, 2024

ಹಾಲಿನಲ್ಲೂ ರಾಸಾಯನಿಕ ಅಂಶಗಳು ಪತ್ತೆ, ಬೆಚ್ಚಿ ಬೀಳಿಸುತ್ತಿದೆ FSSR ವರದಿ

ಬೆಂಗಳೂರು : ಮಾನವನ ದೇಹಕ್ಕೆ ಅಮೃತವಾಗಿರುವ ಹಾಲು ಕೂಡ ವಿಷವಾಗುತ್ತಿದೆ. ರಾಸಾಯನಿಕ ಮಿಶ್ರಿತ ಹಾಲು ನಾನಾ ರೋಗಗಳಿಗೆ ಕಾರಣವಾಗುತ್ತಿದ್ದು, ಹಾಲು ಕೂಡ ಪರಿಶುದ್ದತೆ ಕಳೆದುಕೊಳ್ಳುತ್ತಿದೆ.

ಇತ್ತೀಚೆಗೆ ಮಾರುಕಟ್ಟೆಗಳು ಹೊಸ ಹೊಸ ಬ್ರ್ಯಾಂಡ್ ಗಳನ್ನು ಪರಿಚಯಿಸುತ್ತಿದೆ.‌ ಉಡುಪಿನಿಂದಿಡಿದು ತಿನ್ನುವ ಆಹಾರ ಪದಾರ್ಥಗಳು ಸಹ ಬ್ರ್ಯಾಂಡ್ ಆಗುತ್ತಿದೆ. ಈ ಮಧ್ಯೆ ಹಾಲು ಕೂಡ ಬ್ರ್ಯಾಂಡೆಡ್ ವಸ್ತುಗಳ ಪಟ್ಟಿ ಸೇರಿಕೊಳ್ಳುತ್ತಿದೆ.

ನಿತ್ಯ ಮಾರ್ಕೆಟ್ ನಲ್ಲಿ ಒಂದಿಲ್ಲೊಂದು ಹೊಸ ಬ್ರಾಂಡ್ ನ ಹಾಲು ಲಾಂಚ್ ಆಗುತ್ತಿದೆ. ನಂದಿನಿ ಹಾಲಿಗೆ ಸೆಡ್ಡು ಹೊಡೆಯಲು ವಿವಿಧ ಖಾಸಗಿ ಬ್ರಾಂಡ್ ನ ಹಾಲುಗಳು ಪೈಪೋಟಿ ಮೇಲೆ ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಆದರೆ, ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬಂತೆ ಮಾರ್ಕೆಟ್​ನಲ್ಲಿ ಸಿಗುವ ಎಲ್ಲಾ ಹಾಲು ಪರಿಶುದ್ಧ ಹಾಲು ಅಲ್ಲಾ ಎಂಬ ವರದಿ ಬೆಚ್ಚಿ ಬೀಳಿಸಿದೆ.

ಹಾಲಿನ ಗುಣಮಟ್ಟ ಶೇ. 37.84 ರಷ್ಟು ಕಳಪೆ

ದೇಹಕ್ಕೆ ಶಕ್ತಿ ತುಂಬಾ ಬೇಕಾಗಿದ್ದ ಹಾಲು, ಪ್ಯಾಕೇಟ್ ನಲ್ಲಿ ತುಂಬುವ ಮುನ್ನವೇ ತನ್ನ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತಿದೆ. ಹಾಲಿನ ಗುಣಮಟ್ಟದ ಪರೀಕ್ಷೆ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಇನ್ನು FSSR ನೀಡಿರುವ ವರದಿಯಲ್ಲಿ ಖಾಸಗಿ ಬ್ರಾಂಡ್ ಗಳ ಹಾಲಿನ ಗುಣಮಟ್ಟ ಶೇ. 37.84ರಷ್ಟು ಕಳಪೆಯಾಗಿದ್ದು, ಶೇ. 1.6ರಷ್ಟು ಹಾಲು ಕಲಬೆರಕೆಯಿಂದ ಕೂಡಿರುವುದು ಬೆಳಕಿಗೆ ಬಂದಿದೆ. ಶೇ. 42.47ರಷ್ಟು ಬ್ರ್ಯಾಂಡ್ ‌ಗಳ ಹಾಲಿನ ಗುಣಮಟ್ಟ FSSRನ ಮಾನದಂಡಕ್ಕಿಂತ ಕಡಿಮೆ ಇದೆ.

ಹಾಲಿನ ಮಾನದಂಡವೇನು?

  • ಕೇಂದ್ರದ FSSR ಆ್ಯಕ್ಟ್ ಪ್ರಕಾರ ಹಾಲಿನಲ್ಲಿ ಕೆಲ ಗುಣಾಂಶ ಕಡ್ಡಾಯವಾಗಿರಬೇಕು
  • ಟೋನ್ಡ್ ಹಾಲಿನಲ್ಲಿ ಶೇ. 4.5ರಷ್ಟು ಕೊಬ್ಬು, ಶೇ. 8.5ರಷ್ಟು SNF (ಸಾಲಿಡ್ ನಾನ್ ಫ್ಯಾಟ್) ಇರಬೇಕು
  • ಮಾಮೂಲಿ ಹಾಲಿನಲ್ಲಿ ಶೇ.3ರಷ್ಟು ಕೊಬ್ಬು, ಶೇ.8.5 ರಷ್ಟು SNF ಇರಬೇಕು

ಖಾಸಗಿ ಹಾಲಿನ ಬ್ರ್ಯಾಂಡ್‌ ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ?

  • ಖಾಸಗಿ ಬ್ರ್ಯಾಂಡ್‌ಗಳ ಹಾಲಿನಲ್ಲಿ ವಿಷಕಾರಿ ಅಂಶಗಳು ಪತ್ತೆ
  • ಮಾಲ್ಟೋಡೆಕ್ಸ್ಟ್ರಿನ್, ಅಫ್ಲಾಟಾಕ್ಸಿನ್, ಹೈಡ್ರೋಜನ್ ಪೆರಾಕ್ಸೈಡ್ ರಾಸಾಯನಿಕ ಪತ್ತೆ
  • ಕೆಲ ಹಾಲಿನ ಬ್ರಾಂಡ್ ಗಳಲ್ಲಿ ಸೋಡಿಯಂ, ಸಕ್ಕರೆ, ಉಪ್ಪಿನ ಅಂಶ ಪತ್ತೆ
  • ಹಾಲು ದೀರ್ಘಕಾಲ ಬಾಳಿಕೆ ಬರಲು ಮಾಲ್ಟೋಡೆಕ್ಸ್ಟ್ರಿನ್ ಅಫ್ಲಾಟಾಕ್ಸಿನ್ ರಾಸಾಯನಿಕ ಬಳಕೆ

ರಾಸಾಯನಿಕ ಮಿಶ್ರಿತ ಹಾಲಿನಿಂದಾಗುವ ಸಮಸ್ಯೆಗಳೇನು?

  • ನಾನ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ರಾಸಾಯನಿಕ ಮಿಶ್ರಿತ ಹಾಲು
  • ಅಲರ್ಜಿ, ಹೊಟ್ಟೆ ನೋವು, ವಾಂತಿ, ಗ್ಯಾಸ್ಟ್ರಿಕ್‌, ಸ್ನಾಯು ಸೆಳೆತ
  • ಯಕೃತ್ತಿನಲ್ಲಿ ಹುಣ್ಣು, ದೈಹಿಕ ಬೆಳವಣಿಗೆ ಕುಂಠಿತ, ಮೂತ್ರಪಿಂಡಗಳ ಸಮಸ್ಯೆ
  • ಮೆದೋಜೀರಕ ಗ್ರಂಥಿಯ ಮೇಲೆ ವ್ಯತಿರಿಕ್ತವಾಗಿ ಪರಿಣಾಮ
  • ಮಧು ಮೇಹ, ಸೋರಿಯಸಿಸ್, ಕ್ಯಾನ್ಸರ್ ‌ನಂತ ಗಂಬೀರ ಸಮಸ್ಯೆ

ಒಟ್ನಲ್ಲಿ, ಆರೋಗ್ಯವಂತರಾಗಿರಲು, ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸೇವಿಸುವ ಹಾಲು ಆರೋಗ್ಯಕ್ಕೆ ಸಂಚಕಾರ ತರುತಿದೆ. ಪೈಪೋಟಿಯಿಂದಾಗಿ ಹಾಲು ಕೂಡ ಪರಿಶುದ್ಧತೆ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಇನ್ನಾದರೂ ಖಾಸಗಿ ಬ್ರ್ಯಾಂಡ್ ಹಾಲುಗಳತ್ತಾ ಮುಖ ಮಾಡುತ್ತಿರುವ ಜನತೆ ಶುದ್ದ ಹಾಲನ್ನು ಸೇವಿಸುವುದು ಉತ್ತಮ ಎನ್ನುವುದು ನಮ್ಮ ಸಲಹೆ.

RELATED ARTICLES

Related Articles

TRENDING ARTICLES