Wednesday, January 22, 2025

ಸಾಯಂಗಿದ್ರೆ ನೀನ್ ಸಾಯಬೇಕಿತ್ತು, ಸಾಯೋಕೆ ನನ್ ಕಾರೇ ಬೇಕಿತ್ತಾ? : ಭವಾನಿ ರೇವಣ್ಣ ದರ್ಪ

ಮೈಸೂರು : ಬೈಕ್​ನಲ್ಲಿ ಬಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿಯನ್ನು ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಭವಾನಿ ರೇವಣ್ಣ ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಚಾಲಕ ಹಾಗೂ ಸ್ಥಳೀಯರ ವಿರುದ್ಧ ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಯಂಗಿದ್ರೆ ನೀನ್ ಸಾಯಬೇಕಿತ್ತು, ಬಸ್ಸಿಗೆ ಗಿಸ್ಸಿಗೆ ಸಿಕ್ಕಾಕ್ಕೊಂಡು ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕ್ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರ್ ಬಗ್ಗೆ ಯೋಚನೆ ಮಾಡು ಎಂದು ಬೈಕ್ ಸವಾರನ‌ನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡು ಭವಾನಿ ರೇವಣ್ಣ ದರ್ಪ ಮೆರೆದಿದ್ದಾರೆ.

ಒಂದೂವರೆ ಕೋಟಿ ರೂ. ಗಾಡಿ ಇದು

ಕಾರು ರಿಪೇರಿ ಮಾಡಿಸೋಕೆ 50 ಲಕ್ಷ ಹಣ ಬೇಕು. ಯಾರಾದರೂ ನ್ಯಾಯ ಮಾತನಾಡೋರು 50 ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು. ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್​ನ ಕರೀರಿ. ತಗೊಂಡ್ ಹೋಗಿ ಇವನನ್ನು ಒಳಗೆ ಹಾಕಲಿ ಎಂದು ಏರು ಧ್ವನಿಯಲ್ಲೇ ಧಮ್ಕಿ ಹಾಕಿದ್ದಾರೆ.

RELATED ARTICLES

Related Articles

TRENDING ARTICLES