Monday, December 23, 2024

ಭಾರತಕ್ಕೆ ಆಸರೆಯಾದ ಶ್ರೇಯಸ್ ಅಯ್ಯರ್ : ಆಸ್ಟ್ರೇಲಿಯಾದ 3ನೇ ವಿಕೆಟ್ ಪತನ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್​ ಗಳಿಸಿತು.

ಭಾರತದ ಪರ ಕ್ಲಾಸ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ಮಿಂಚಿದರು. ಆರಂಭಿಕರಾದ ಜೈಸ್ವಾಲ್, ಗಾಯಕ್ವಾಡ್ ಹಾಗೂ ನಾಯಕ ಸೂರ್ಯಕುಮಾರ್ ಬೇಗ ಔಟಾದ ಕಾರಣ ಭಾರತ ಸಂಕಷ್ಟದಲ್ಲಿತ್ತು. ಈ ವೇಳೆ ಶ್ರೇಯಸ್​ ಅಯ್ಯರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.

37 ಎಸೆತಗಳನ್ನು ಎದುರಿಸಿದ ಅಯ್ಯರ್ 2 ಸಿಕ್ಸರ್ ಹಾಗೂ 5 ಬೌಂಡಿರಿ ನೆರವಿನೊಂದಿಗೆ 53 ರನ್​ ಗಳಿಸಿ ಔಟಾದರು. ಇನ್ನೂ ಕಳೆದ ನಾಲ್ಕು ಪಂದ್ಯಗಳಲ್ಲಿ ಮಿಂಚಿದ ರಿಂಕು ಸಿಂಗ್ ಕೇವಲ 6 ರನ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ (31) ಹಾಗೂ ಜಿತೇಶ್ ಶರ್ಮಾ (24)ಅಬ್ಬರಿಸಿ ತಂಡದ ಮೊತ್ತವನ್ನು 150 ಗಡಿ ದಾಡಿಸಿದರು.

ಋತುರಾಜ್ ಗಾಯಕ್ವಾಡ್ 10, ಯಶಸ್ವಿ ಜೈಸ್ವಾಲ್ 21, ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಜೇಸನ್ ಬೆಹ್ರೆನ್‌ಡಾರ್ಫ್ 2, ಬೆನ್ ದ್ವಾರ್ಶುಯಿಸ್ 2, ತನ್ವೀರ್ ಸಂಘ ಹಾಗೂ ಆರನ್ ಹಾರ್ಡಿ ತಲಾ ಒಂದು ವಿಕೆಟ್ ಪಡೆದರು.

ಆಸಿಸ್ 3ನೇ ವಿಕೆಟ್ ಪತನ

161 ರನ್​ಗಳ ಟಾರ್ಗೆಟ್ ಬೆನ್ನತ್ತಿರುವ ಆಸ್ಟ್ರೇಲಿಯಾ 3 ವಿಕೆಟ್ ಗಳನ್ನು ಕಳೆದುಕೊಂಡಿದೆ. 11 ಓವರ್​ಗಳಲ್ಲಿ 80 ರನ್​ ಕಲೆಹಾಕಿದೆ. ಟ್ರಾವಿಸ್ ಹೆಡ್ 28, ಜೋಶ್ ಫಿಲಿಪ್ 4 ಹಾಗೂ ಆರನ್ ಹಾರ್ಡಿ 6 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ರವಿ ಬಿಷ್ಣೋಯಿ 2 ಹಾಗೂ ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES