Wednesday, January 22, 2025

ಕುರಿಗಳ ಜೊತೆ ಬಂದು ಮಾದಪ್ಪನಿಗೆ ಹರಕೆ ತೀರಿಸಿದ ರೈತ

ಚಾಮರಾಜನಗರ : ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳವಾದ ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಸ್ವಾಮಿ ಅಸಂಖ್ಯಾತ ಭಕ್ತರ ಆರಾಧ್ಯ ದೈವ. ಅದರಂತೆ, ರೈತನೋರ್ವ ಕುರಿಗಳ ಜೊತೆ ಬಂದು ಹರಕೆ ತೀರಿಸಿ ಗಮನ ಸೆಳೆದಿದ್ದಾರೆ.

ಮಂಡ್ಯ ಮೂಲದ ರೈತ ಮಾದೇಗೌಡ ಎಂಬವರು ತಮ್ಮ 15ಕ್ಕೂ ಹೆಚ್ಚು ಕುರಿಗಳನ್ನು ವಾಹನದಲ್ಲಿ ತಂದು ಮಲೆ ಮಾದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗ ಭಕ್ತರ ಜೊತೆ ದೇವಾಲಯದ ಸುತ್ತಲೂ ಮೂರು ಪ್ರದಕ್ಷಿಣೆ ಮೆರವಣಿಗೆ ಮಾಡುವ ಮೂಲಕ ಮಾದಪ್ಪನ ಹರಕೆ ತೀರಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ವಿವಿಧ ಹರಕೆಗಳನ್ನು ತೀರಿಸಲು ಮತ್ತು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಬೇಡಿಕೊಂಡು ತಮ್ಮ ಇಷ್ಟಾರ್ಥ ಫಲಿಸಿದ ನಂತರ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುವ ಪದ್ಧತಿ ಇದೆ.

ಮಹದೇಶ್ವರನಿಗೆ 3 ಪ್ರದಕ್ಷಿಣೆ

ಅದರಂತೆ, ಇಂದು ಮಂಡ್ಯ ಜಿಲ್ಲೆಯ ರೈತ ಮಾದೇಗೌಡ ತನ್ನ 15ಕ್ಕೂ ಕುರಿಗಳನ್ನು ತೊಳೆದು ಸ್ವಚ್ಛಗೊಳಿಸಿ ಮಲೆ ಮಹದೇಶ್ವರನಿಗೆ 3 ಪ್ರದಕ್ಷಿಣೆ ಹಾಕಿಸಿದ್ದಾರೆ. ಇನ್ನು, ಕುರಿಗಳ ಜೊತೆ ಮಾದಪ್ಪನಿಗೆ ಪ್ರದಕ್ಷಿಣೆ ಹಾಕುವುದನ್ನು ಕಂಡ ಭಕ್ತರು ಮಹದೇಶ್ವರನಿಗೆ ಘೋಷಣೆ ಕೂಗಿ ಭಕ್ತಿ ಮೆರೆದಿದ್ದಾರೆ.

RELATED ARTICLES

Related Articles

TRENDING ARTICLES