ದಾರವಾಡ: ಬೆಂಗಳೂರಿನಲ್ಲಿ ಹಲವು ಶಾಲೆಗಳಿಗೆ ಒಟ್ಟಿಗೆ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಸಶಕ್ತ ನಾಯಕತ್ವದ ಕೊರತೆ ಕಾರಣವೆಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಏಕಕಾಲಕ್ಕೆ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಬರುತ್ತದೆ ಎಂದರೆ ಏನು? ಜನರನ್ನು ಭಯದ ವಾತಾವರಣದಲ್ಲಿಟ್ಟು ಆಡಳಿತ ಮಾಡುವ ಹುನ್ನಾರ ಇದು. ಯಾವ ಕಾರಣಕ್ಕೂ ಅಂತಹ ದೇಶದ್ರೋಹಿಗಳ ಬಿಡಬಾರದು. ಆಡಳಿತ ಪಕ್ಷದಲ್ಲಿನ ಸಶಕ್ತ ನಾಯಕತ್ವದ ಕೊರತೆಯಿಂದ ಅಂಥವರನ್ನು ಇನ್ನೂ ಮಟ್ಟಹಾಕಲು ಆಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹತ್ಯೆ ಮಾಡಿ ಭ್ರೂಣಗಳನ್ನು ಟಾಯ್ಲೆಟ್‌ಗೆ ಎಸೆಯುತ್ತಿದ್ದೆವು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ…
ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿ, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಷ್ಟು ಬೆಳೆದಿಲ್ಲ. ಕಳೆದ ಭಾರಿಗಿಂತ ಈ ಸಲ ಬಿಜೆಪಿ ಮತಬ್ಯಾಂಕ್ ಹೆಚ್ಚಳವಾಗಿದೆ. ಛತ್ತೀಸಗಢದಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದೇವೆ. ಉಳಿದ ಕಡೆಗಳಲ್ಲಿ ನಾವು ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಎಂದು ತಿಳಿಸಿದರು.