Sunday, May 12, 2024

ಸಲಾರ್ ರಿವ್ಯೂ​ಗಳ ಮಧ್ಯೆ ವೀವ್ಸ್ ರೆಕಾರ್ಡ್​: 13 ಗಂಟೆಯಲ್ಲಿ 4 ಕೋಟಿ ವೀವ್ಸ್​!

ಸಲಾರ್ ಟ್ರೈಲರ್ ಯೂಟ್ಯೂಬ್​ನಲ್ಲಿ ಸಖತ್ ಸಂಚಲನ ಮೂಡಿಸಿದೆ. ಒಂದ್ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ರಿವ್ಯೂವ್ಸ್ ಅಬ್ಬರವಾದ್ರೆ, ಮತ್ತೊಂದ್ಕಡೆ ಯೂಟ್ಯೂಬ್ ವೀವ್ಸ್. ಎರಡರ ಜುಗಲ್​ಬಂದಿ ಸಖತ್ ಜೋರಿದೆ. ಎರಡು ಭಾಗಗಳಲ್ಲಿ ಬರ್ತಿರೋ ಸಲಾರ್ ಮೊದಲ ಭಾಗ ಮಾಡಿದ ಆಲ್​ಟೈಂ ರೆಕಾರ್ಡ್ಸ್ ಏನು..? ಆನ್​ಲೈನ್ ಟಿಕೆಟ್ ಬುಕ್ಕಿಂಗ್​ಗೆ ಹೊಂಬಾಳೆ ಮಾಡಿರೋ ಮಾಸ್ಟರ್​ಪ್ಲ್ಯಾನ್ ಏನು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್​ ನಿಮ್ಮ ಮುಂದೆ.

ಸಲಾರ್ ರಿವ್ಯೂ​ಗಳ ಮಧ್ಯೆ ವೀವ್ಸ್  ಅಬ್ಬರ, ಆರ್ಭಟ

ಕೆಜಿಎಫ್ ಚಾಪ್ಟರ್-2 ಬಳಿಕ ಹೊಂಬಾಳೆ ಫಿಲಂಸ್ ಮಗದೊಮ್ಮೆ ಅದೇ ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಜೊತೆ ತಯಾರಿಸಿರೋ ಅಡುಗೆ ಈ ಸಲಾರ್ ಸೀಸ್​ಫೈಯರ್-1. ಯೆಸ್.. ಬಾಹುಬಲಿ ಫೇಮ್ ಡಾರ್ಲಿಂಗ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ – ವಿಜಯ್ ಕಿರಗಂದೂರು ಕಾಂಬೋ ಅಂದಾಗ ಸಹಜವಾಗಿಯೇ ಕ್ರೇಜ್ ಮುಗಿಲುಮುಟ್ಟಿತ್ತು. ಅದಕ್ಕೆ ಪೂರಕವಾಗಿ ಟ್ರೈಲರ್ ಲಾಂಚ್ ಆಗಿದೆ.

ಇದನ್ನೂ ಓದಿ: ಇಂದಿನಿಂದ ಕಡಲೆಕಾಯಿ ಪರಿಷೆ ಆರಂಭ!

13 ಗಂಟೆ, 4 ಕೋಟಿ ವೀವ್ಸ್.. ರೆಕಾರ್ಡ್ಸ್ ಪೀಸ್ ಪೀಸ್

ಡೈನೋಸಾರ್ ಎಂಟ್ರಿಗೆ ಸೋಶಿಯಲ್ ಮೀಡಿಯಾ ಅಲ್ಲಾಡಿ ಹೋಗಿದೆ. ಯೂಟ್ಯೂಬ್ ಅಕ್ಷರಶಃ ತತ್ತರಿಸಿದೆ. ಟೀಸರ್​ನಿಂದ ಸಿನಿಮಾ ಮೂಡಿಸಿದ್ದ ನಿರೀಕ್ಷೆಯಂತೆ DCT- ಡಾರ್ಕ್​ ಸೆಂಟ್ರಿಕ್ ಥೀಮ್​ನಡಿ ಪ್ರಶಾಂತ್ ನೀಲ್ ಸಲಾರ್ ಸಿನಿಮಾನ ಹೇಗೆ ಕಟ್ಟಿಕೊಟ್ಟಿದ್ದಾರೆ ಅನ್ನೋದ್ರ ಹಿಂಟ್​​ನ ಟ್ರೈಲರ್ ಮೂಲಕ ಕೊಟ್ಟಿದ್ದಾರೆ. ಟ್ರೈಲರ್ ಒನ್ಸ್ ಅಗೈನ್ ಕತ್ತಲು, ಹೊಡಿ ಬಡಿ ಕಡಿ ಅನ್ನೋ ಕ್ರೌರ್ಯ. ಉಗ್ರಂ ಸಿನಿಮಾನೇ ಕೆಜಿಎಫ್ ಲೆವೆಲ್​​ನಲ್ಲಿ ರಿಚ್ ಆಗಿ ಮಾಡಲಾಗಿದೆ ವಗೇರಾ ವಗೇರಾ ನೆಗೆಟಿವ್ ರಿವ್ಯೂವ್ಸ್ ನಡುವೆಯೂ ಕಂಟೆಂಟ್​​ನಿಂದ ವೀವ್ಸ್​ನಲ್ಲಿ ದಾಖಲೆ ಬರೆದಿದೆ.

ಹೊಂಬಾಳೆ ಫಿಲಂಸ್​ನ ಮತ್ತೊಂದು ಆ್ಯಕ್ಷನ್​ ಸಾಗಾ

ಸುಮಾರು ಐದು ಭಾಷೆಯಲ್ಲಿ ರಿಲೀಸ್ ಆದ ಸಲಾರ್ ಟ್ರೈಲರ್​, ಕೇವಲ 13 ಗಂಟೆಯಲ್ಲಿ ಬರೋಬ್ಬರಿ 4 ಕೋಟಿ ವೀವ್ಸ್ ಮೂಲಕ ಎಲ್ಲರ ಹುಬ್ಬೇರಿಸಿದೆ. ಅಂದಹಾಗೆ ಇದು ರಿಯಲ್ ಟೈಂ ವೀವ್ಸ್ ಅಲ್ಲ. ನಮಗೆ ಯೂಟ್ಯೂಬ್​ನಲ್ಲಿ ಕಾಣಿಸೋ ವೀವ್ಸ್ ಅಷ್ಟೇ. ರಿಯಲ್ ಟೈಮ್​ನಲ್ಲಿ ಇನ್ನೂ ಹೆಚ್ಚಿನ ವೀವ್ಸ್ ಆಗಿರೋದ್ರಲ್ಲಿ ಸಂಶಯವೇ ಇಲ್ಲ. ಅದ್ರಲ್ಲೂ ಹಿಂದಿ ಹಾಗೂ ತೆಲುಗು ವರ್ಷನ್​ನಲ್ಲಿ ಹೆಚ್ಚಿನ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿರೋದು ಇಂಟರೆಸ್ಟಿಂಗ್. ಈ ಮೂಲಕ ಹೊಂಬಾಳೆ ಫಿಲಂಸ್​​ನ ಈ ಹಿಂದಿನ ಟ್ರೈಲರ್ ರೆಕಾರ್ಡ್ಸ್ ಎಲ್ಲಾ ಉಡೀಸ್ ಆಗಿದ್ದು, ನ್ಯೂ ಟ್ರೆಂಡ್ ಸೆಟ್ ಮಾಡಿದ್ದಾರೆ ಪ್ರೊಡ್ಯೂಸರ್ ವಿಜಯ್ ಕಿರಗಂದೂರು.

ಇದನ್ನೂ ಓದಿ: ಪರಿಹಾರ ಕೇಳಿದ ರೈತನ ಮೇಲೆ ಸಂಸದ ಡಿ.ಕೆ.ಸುರೇಶ್ ಗರಂ

ಡಿಸೆಂಬರ್ 15ರಿಂದಲೇ ಆನ್​ಲೈನ್ ಬುಕ್ಕಿಂಗ್ ಶುರು

ಡಿಸೆಂಬರ್ 22ಕ್ಕೆ ಸಲಾರ್ ವರ್ಲ್ಡ್​ವೈಡ್ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿದ್ದು, ಡಿಸೆಂಬರ್ 15ರಿಂದಲೇ ಆನ್​ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗ್ತಿದೆ. ಇದು ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಕೂಡ ಆಗಿದ್ದು, ಪ್ರಶಾಂತ್ ನೀಲ್ ಮೇಕಿಂಗ್ ಹಾಗೂ ಪ್ರಭಾಸ್- ಪೃಥ್ವಿರಾಜ್ ಸುಕುಮಾರನ್ ನಡುವಿನ ಸ್ನೇಹದ ಗಮ್ಮತ್ತನ್ನ ಕಣ್ತುಂಬಿಕೊಳ್ಳೋಕೆ ರಿವ್ಯೂವ್ಸ್ ಕೊಟ್ಟವ್ರೆಲ್ಲಾ ಒಮ್ಮೆಯಾದ್ರೂ ಥಿಯೇಟರ್​ಗೆ ಬಂದೇ ಬರಲಿದ್ದಾರೆ ಅನ್ನೋದು ಸದ್ಯದ ಲೆಕ್ಕಾಚಾರ.

ಕೆಜಿಎಫ್ ಬಳಿಕ ಹೊಂಬಾಳೆಯ ಮತ್ತೊಂದು ಆ್ಯಕ್ಷನ್ ಸಾಗಾ ಇದಾಗಲಿದ್ದು, ನೋಡುಗರಿಗೆ ಮಸ್ತ್ ಥ್ರಿಲ್ ಕೊಡಲಿದೆ ಸಲಾರ್ ಸೀಸ್​ ಫೈಯರ್-1. ಮೇಕಿಂಗ್​ನಲ್ಲಿ ಕೆಜಿಎಫ್ ನೆರಳು ಕಾಣಿಸಿದ್ರೂ, ಕಂಟೆಂಟ್​ನಲ್ಲಿ ಉಗ್ರಂ ಗಾಳಿ ಬೀಸಿದ್ರೂ, ಪ್ರಶಾಂತ್ ನೀಲ್​ಗೆ ನೋಡುಗರನ್ನ ಎಂಗೇಜ್ ಮಾಡಿಸೋ ಮ್ಯಾಜಿಕ್ ಗೊತ್ತಿದೆ. ಹಾಗಾಗಿ ಲಾಜಿಕ್​ಗಳನ್ನೆಲ್ಲಾ ಪಕ್ಕಕ್ಕಿಟ್ಟು ಎಂಟರ್​ಟೈನ್ಮೆಂಟ್ ವಿಚಾರದಲ್ಲಿ ಯಾವುದೇ ಕೊರತೆ ಆಗದಂತೆ ಸಲಾರ್ ಸೆಲೆಬ್ರೇಷನ್ ಜೋರಿದಲಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.

ಇನ್ನು, ನೋಡುಗರಿಗೆ ಇರೋ ಎಲ್ಲಾ ಸಂಶಯಗಳಿಗೆ ಡಿಸೆಂಬರ್ 22ರಂದು ಉತ್ತರ ಸಿಗಲಿದೆ. ಸಾಲು ಸಾಲು ಸಿನಿಮಾಗಳಿಂದ ಸೋತಿರೋ ಪ್ರಭಾಸ್​ಗೆ ಇದು ಮಹತ್ವದ ತಿರುವು ನೀಡಲಿದ್ದು, ಬಾಕ್ಸ್ ಆಫೀಸ್​​ ಕಬ್ಜ ಮಾಡೋ ಮುನ್ಸೂಚನೆ ನೀಡಿದೆ. ನಮ್ಮ ಕನ್ನಡಿಗರಿಂದ ಇಂಥದ್ದೊಂದು ಪ್ರಯೋಗ ಸಾಕಾರವಾಗ್ತಿರೋದು ನಿಜಕ್ಕೂ ಖುಷಿ ಹಾಗೂ ಹೆಮ್ಮೆಯ ಸಂಗತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES