Thursday, January 9, 2025

ಏನ್ ‘ಪಸಂದಾಗವನೆ’ : ‘ಕಾಟೇರ’ ಚಿತ್ರದ ಮೊದಲ ಹಾಡು ಡಿ.4ರಂದು ರಿಲೀಸ್

ಬೆಂಗಳೂರು : ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕಾಟೇರ’ ಚಿತ್ರದ ಮೊದಲ ಹಾಡು ‘ಪಸಂದಾಗವನೆ’ ಡಿಸೆಂಬರ್ 4ರಂದು ಸೋಮವಾರ 12.30ಕ್ಕೆ ಬಿಡುಗಡೆಯಾಗಲಿದೆ.

ಚಿತ್ರದ ನಾಯಕ ದರ್ಶನ್ ಅವರನ್ನು ನಾಯಕ ನಟಿ ಆರಾಧನಾ ರಾಮ್ ಅವರು ಹೊಗಳುವ ಸಾಲುಗಳು ಈ ಹಾಡಿನಲ್ಲಿರಲಿದೆ. ನಟ ಹಾಗೂ ನಾಯಕ ನಟಿ ಇಬ್ಬರೂ ಹಳ್ಳಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ.

ನಟ ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕಾಟೇರ’ ರಿಲೀಸ್ ಟೀಸರ್ 2.2 ಮಿಲಿಯನ್ ವೀಕ್ಷಣೆಯೊಂದಿಗೆ #1 ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿ ರಾರಾಜಿಸುತ್ತಿದೆ. ಈ ಮಧ್ಯೆಯೇ ಡಿ ಬಾಸ್ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಸರ್ಪ್ರೈಸ್​ ಗಿಫ್ಟ್ ನೀಡಲು ಸಜ್ಜಾಗಿದೆ.

ಕಾಟೇರ ಚಿತ್ರದಲ್ಲಿ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ಡಿ ಬಾಸ್ ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಚಿತ್ರ ಮಂದಿರಗಳಲ್ಲಿ ದರ್ಶನ ನೀಡಲು ಸಜ್ಜಾಗಿದ್ದಾರೆ. ಕಾಟೇರ ಡಿಸೆಂಬರ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಕಾಟೇರ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚೌಕ, ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಕಾಟೇರವನ್ನು ನಿರ್ದೇಶಿಸಿದ್ದಾರೆ. ಇನ್ನೂ ಧೀರ ರಾಕ್​ಲೈನ್ ವೆಂಕಟೇಶ್ ಅವರು ಕಾಟೇರಗೆ ಬಂಡವಾಳ ಹೂಡಿದ್ದಾರೆ.

RELATED ARTICLES

Related Articles

TRENDING ARTICLES