Saturday, May 18, 2024

ತೆಲಂಗಾಣ ಚುನಾವಣೆ ಫಲಿತಾಂಶ ಅತಂತ್ರ! : ಶಾಸಕರಿಗೆ ಬಲೆ ಬೀಸಲು ಜಮೀರ್​ ಗೆ ಟಾಸ್ಕ್​!

ಬೆಂಗಳೂರು: ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೆಲಂಗಾಣದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​​​ ಅಲರ್ಟ್ ಆಗಿದೆ.

ತೆಲಂಗಾಣ ವಿಧಾನಸಭಾ ಫಲಿತಾಂಶಕ್ಕೂ ಮುನ್ನವೇ AICC ಕರ್ನಾಟಕ ನಾಯಕರನ್ನ ತೆಲಂಗಾಣದಲ್ಲಿ ನಿಯೋಜಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ್​​​​​ ಬೆನ್ನಲ್ಲೇ ಸಚಿವ ಜಮೀರ್‌ ಅಹ್ಮದ್‌ಗೂ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೆಣುಗೋಪಾಲ್​​ ಸೂಚನೆ ನೀಡಿದ್ದಾರೆ. ಕೆ.ಸಿ.ವೇಣುಗೋಪಾಲ್​​ ಸೂಚನೆ ಹಿನ್ನೆಲೆ ಜಮೀರ್​ ಅಹ್ಮದ್​​​ ಖಾನ್​ ತೆಲಂಗಾಣಕ್ಕೆ ತೆರಳಿದ್ದಾರೆ.  ಜಮೀರ್​ ಅಹ್ಮದ್​ ಖಾನ್​​ ಹೈದ್ರಾಬಾದ್​​​​​ ಸಿಟಿ ಸೇರಿದಂತೆ ತೆಲಂಗಾಣದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. 20ಕ್ಕೂ ಹೆಚ್ಚು ದಿನ ಹೈದ್ರಾಬಾದ್‌ನಲ್ಲೇ ಠಿಕಾಣಿ‌ ಹೂಡಿ ಮತ ಭೇಟೆಯಾಡಿದ್ದರು.

ಇದನ್ನೂ ಓದಿ: ಮಧು ಬಂಗಾರಪ್ಪ ಗೆ ಅಹಂ ಜಾಸ್ತಿ ಆಗಿದೆ: ಬೇಳೂರು ಗೋಪಾಲಕೃಷ್ಣ

ಜಮೀರ್​​ ತೆಲಂಗಾಣದಲ್ಲೂ ಸಾಕಷ್ಟು ಹಿಡಿತ ಸಾಧಿಸಿದ್ದಾರೆ. ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕಾಂಗ್ರೆಸ್ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​​ ಹೈಕಮಾಂಡ್​ ತಂತ್ರ ರೂಪಿಸಿದೆ. ಜೊತೆಗೆ ತಮ್ಮ‌ತಮ್ಮ ಸಂಪರ್ಕಕ್ಕೆ ಸಿಗುವ ಇತರ ಪಕ್ಷಗಳ ಗೆಲ್ಲುವವರನ್ನ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES