Wednesday, January 22, 2025

ಇತಿಹಾಸ ಸೃಷ್ಟಿಸಿದ ‘ಅನಿಮಲ್’ ಸಿನಿಮಾ : ಒಂದೇ ದಿನ 116 ಕೋಟಿ ಗಳಿಕೆ

ಬೆಂಗಳೂರು : ಅನಿಮಲ್ ಚಿತ್ರಕ್ಕೆ ಸಿನಿ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ರಣ್​ಬೀರ್ ಕಪೂರ್ ನಟನೆಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ.

ಈ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ವಿಶ್ವದಾದ್ಯಂತ ‘ಅನಿಮಲ್’ ಸಿನಿಮಾ ಮೊದಲ ದಿನವೇ 116 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ವರ್ಲ್ಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿದೆ.

ಸಖತ್ ಮಾಸ್ ಅವತಾರದ ಈ ಸಿನಿಮಾ ಭಾರಿ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಸಹ ‘ಅನಿಮಲ್’ ದೊಡ್ಡ ಹಿಟ್ ಆಗಿದೆ. ಮೊದಲ ದಿನ ವಿಶ್ವದಾದ್ಯಂತ ಭಾರಿ ಕಲೆಕ್ಷನ್ ಮಾಡಿದೆ.

ಪಠಾಣ್​ ದಾಖಲೆ ಮುರಿದ ಅನಿಮಲ್

ಈ ವರ್ಷದ ಬ್ಲಾಕ್ ಬಸ್ಟರ್ ಹೀರೋ ಆದ ಶಾರುಖ್ ಖಾನ್​ರ ಸಿನಿಮಾದ ದಾಖಲೆಯನ್ನೇ ಪುಡಿಗಟ್ಟಿದೆ. ಪಠಾಣ್ ಸಿನಿಮಾದ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದಿದೆ. ಪಠಾಣ್ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 105 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆ ದಾಖಲೆಯನ್ನು ಇದೀಗ ‘ಅನಿಮಲ್’ ಸಿನಿಮಾ ಉಡೀಸ್ ಮಾಡಿದೆ.

RELATED ARTICLES

Related Articles

TRENDING ARTICLES