Friday, November 22, 2024

ತೆಲಂಗಾಣ ಶಾಸಕರ ಹಿತವೇ ಡಿಕೆಶಿಗೆ ಹೆಚ್ಚಾಗಿದೆ : ಆರ್. ಅಶೋಕ್

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆಲಂಗಾಣ ಭೇಟಿ ವಿಚಾರದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ಇಲ್ಲಿನ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ಜನರ ಹಿತ, ಕಷ್ಟ ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ತೆಲಂಗಾಣ ಶಾಸಕರ ಹಿತವೇ ಡಿ.ಕೆ. ಶಿವಕುಮಾರ್​ ಅವರಿಗೆ ಹೆಚ್ಚಾಗಿದೆ. ರಾಜ್ಯದ ಜತರ ಕಷ್ಟಕ್ಕಿಂತಲೂ ತೆಲಂಗಾಣ ಶಾಸಕರ ಯೋಗಕ್ಷೇಮವೇ ಡಿಕೆಶಿಗೆ ಮುಖ್ಯ. ತೆಲಂಗಾಣ ಶಾಸಕರಿಗೆ ಯಾವ ಹೊಟೇಲ್​ನಲ್ಲಿ ಇರಿಸಬೇಕು? ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಕೊಡಿಸಬೇಕಾ? ಯೋಗಕ್ಷೇಮ ಹೇಗೆ ಮಾಡಬೇಕು ಅನ್ನೋದೇ ಡಿಕೆಶಿಗೆ ಮುಖ್ಯ. ಇವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

BJP-JDS ಒಟ್ಟಾಗಿ ಹೋರಾಟ ಮಾಡ್ತಿವಿ

ಬೆಳಗಾವಿ ಅಧಿವೇಶನ ಬಿಜೆಪಿ ಪಾಲಿಗೆ ಪ್ರಮುಖ ಅಧಿವೇಶನ. ಕಾಂಗ್ರೆಸ್​ ಸರ್ಕಾರ ಬಂದಾಗಿಂದ 60 ತಪ್ಪುಗಳಾಗಿವೆ. ಬಂದ ಕೂಡಲೇ ವರ್ಗಾವಣೆ ಅಂಗಡಿ ತೆರೆದರು. ಐಟಿ ದಾಳಿಯಾಗಿ ಇವರ ಲೂಟಿ ಹಣ ಸಿಕ್ಕಿದೆ. ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ, ಒಟ್ಟಾಗಿ ಹೋರಾಟ ಮಾಡುತ್ತೇವೆ. ನಿಲುವಳಿಗಳನ್ನೂ ಒಟ್ಟಾಗಿ ಮಂಡಿಸಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಬಿಜೆಪಿಯವರು ಜನಸಂಘದವರನ್ನು ಕಡೆಗಣಿಸಿದ್ದಾರೆ : ಜಗದೀಶ್ ಶೆಟ್ಟರ್ 

ನಿಲುವಳಿ ಸೂಚನೆ ಮಂಡಿಸಿ, ಚರ್ಚಿಸುತ್ತೇವೆ

ಮುಖ್ಯವಾಗಿ ಕಾಂಗ್ರೆಸ್​ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ, ಮಂತ್ರಿಗಳು ಬರ ನಿರ್ವಹಣೆಗೆ ಯಾವ ಕೆಲಸವನ್ನೂ ಮಾಡಿಲ್ಲ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬರ, ಕಾನೂನು ಸುವ್ಯವಸ್ಥೆ ವೈಫಲ್ಯ, ಶಾಲೆಗಳಿಗೆ ಹುಸಿ ಬಾಂಬ್ ಮೇಲ್, ಸಚಿವ ಜಮೀರ್ ಅಹ್ಮದ್ ಅಸಂಬದ್ಧ ಹೇಳಿಕೆ, ಎನ್‌ಇಪಿ ರದ್ದು, ಜಾತಿಜನಗಣತಿ ವರದಿ, ನೀರಾವರಿ ಯೋಜನೆಗಳು ವಿಚಾರಗಳಲ್ಲಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಮಾಡುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES