Wednesday, January 22, 2025

ವಿಜಯಪುರದಲ್ಲಿ 15 ಶ್ವಾನಗಳ ಕಗ್ಗೊಲೆ : ಮೂಕಪ್ರಾಣಿಗಳಿಗೆ ವಿಷವುಣಿಸಿ ಮಹಾಕ್ರೌರ್ಯ

ವಿಜಯಪುರ : ಇತ್ತೀಚೆಗೆ ವಿಜಯಪುರ ‌ನಗರದ ಜುಮ್ಮಾ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಬಡಾವಣೆಯ ಹಲವು ಬಾಲಕರ ಮೇಲೆ ಶ್ವಾನಗಳು ದಾಳಿ ಮಾಡಿದ್ದವು. ಬಳಿಕ ಪಾಲಿಕೆಯು ಶ್ವಾನಗಳನ್ನು ಹಿಡಿದಿತ್ತು. ಈ ಬೆನ್ನಲ್ಲೇ ಕಿಡಿಗೇಡಿಗಳು 15ಕ್ಕೂ ಅಧಿಕ ಶ್ವಾನಗಳನ್ನು ಕೊಂದಿದ್ದಾರೆ. ಇದು ಪ್ರಾಣಿಪ್ರಿಯರನ್ನು ಕೆರಳಿಸಿದೆ.

ವಿಜಯಪುರ ನಗರದ ಬಡಿಕಮಾನ್, ಬಾಗಾಯತ್ ಬಡಾವಣೆ, ನಾಗರಬಾವಡಿ, ಶೆಡಜಿ ಮುಲ್ಲಾ ಬಡಾವಣೆ, ಜುಮ್ಮಾ ಮಸೀದಿ ಸೇರಿದಂತೆ ಹಲವು ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತು. ನವೆಂಬರ್ 27ರಂದು ಮೂವರು ಬಾಲಕರ ಮೇಲೆ ಶ್ವಾನಗಳು ದಾಳಿ ಮಾಡಿದ್ದವು. ಮಕ್ಕಳು ಭಯದಲ್ಲೇ ಓಡಾಡುವಂತಾಗಿತ್ತು. ಎಚ್ಚೆತ್ತ ಪಾಲಿಕೆ ಬೀದಿನಾಯಿಗಳನ್ನು ಹಿಡಿದಿತ್ತು. ಈ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಮಾಂಸದಲ್ಲಿ ವಿಷವುಣಿಸಿ 15ಕ್ಕೂ ಅಧಿಕ ಶ್ವಾನಗಳನ್ನು ಕೊಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಹತ್ಯೆ ಮಾಡಿ ಭ್ರೂಣಗಳನ್ನು ಟಾಯ್ಲೆಟ್‌ಗೆ ಎಸೆಯುತ್ತಿದ್ದೆವು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್! 

ವಿಷಮಿಶ್ರಿತ ಮಾಂಸ ಸೇವಿಸಿದ ಶ್ವಾನಗಳು ಒದ್ದಾಡುತ್ತಿದ್ದುದನ್ನು ಕಂಡ ಸ್ಥಳೀಯರು ಅವುಗಳನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದರೂ ಅವು ಬದುಕುಳಿಯಲಿಲ್ಲ. ಜುಮ್ಮಾ ಮಸೀದಿ ಪ್ರದೇಶದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು, ಇದು ಅವರದ್ದೇ ಕ್ರೌರ್ಯ ಎಂದು ಸ್ಥಳೀಯರು ಹೇಳಿದ್ದಾರೆ.

ಪಾಲಿಕೆಯೇ ಶ್ವಾನಗಳಿಗೆ ವಿಷ ಉಣಿಸಿತ್ತಾ?

ಇನ್ನೂ ಇತ್ತೀಚೆಗೆ ಶ್ವಾನಗಳನ್ನು ಹಿಡಿದುಕೊಂಡು ಹೋದ ಪಾಲಿಕೆ ಸಿಬ್ಬಂದಿ ಏನಾದರೂ ಶ್ವಾನಗಳಿಗೆ ವಿಷ ಉಣಿಸಿತ್ತಾ? ಅಥವಾ ಇದು ಕಳ್ಳರು ಮಾಡಿದ ಕೃತ್ಯವಾ? ಎಂಬುದು ಪೊಲೀಸರ ತನಿಖೆ‌ಯಿಂದಷ್ಟೇ ತಿಳಿಯಬೇಕಿದೆ.

RELATED ARTICLES

Related Articles

TRENDING ARTICLES