Sunday, December 22, 2024

ಬೈಕ್ ಗ್ಯಾರೇಜ್​ಗೆ ಬೆಂಕಿ : 5 ಬೈಕ್ ಸೇರಿ 10 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

ವಿಜಯಪುರ : ಬೈಕ್ ಗ್ಯಾರೇಜ್​​ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

ಐದು ಬೈಕ್, ನಾಲ್ಕು ಬೈಕ್ ಇಂಜಿನ್​​ಗಳು, ಏರ್ ಕಂಪ್ರಶನ್, ವಾಟರ್​​ ವಾಶ್​​ ಮಶಿನ್, ಸೇರಿದಂತೆ ಸುಮಾರು ಹತ್ತು ಲಕ್ಷ ಮೌಲ್ಯಕ್ಕೂ ಹೆಚ್ಚು ಅಧಿಕ ಹಾನಿಯಾಗಿದೆ.

ಕಾಂತಯ್ಯ ಮಠಮತಿ ಎಂಬುವವರಿಗೆ ಗ್ಯಾರೇಜ್ ಸೇರಿದ್ದು, ಕಾಂತಯ್ಯ ಮಠಪತಿ ಮೂಲತಃ ಮುದ್ದೇಬಿಹಾಳ ತಾಲೂಕಿನ ಅರಸನಾಳ ಗ್ರಾಮದವರು. ಕಾಂತಯ್ಯ ಮಠಪತಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES