Friday, November 22, 2024

ಇಲ್ಲಿಂದ ದುಡ್ಡು ತಕೊಂಡು ಹೋಗಿ ತೆಲಂಗಾಣಕ್ಕೆ ಕೊಟ್ಟು ಬರೋದೇ ಡಿಕೆಶಿ ಕೆಲಸ : ಆರ್. ಅಶೋಕ್

ಬೆಂಗಳೂರು : ಇಲ್ಲಿಂದ ದುಡ್ಡು ತೆಗೆದುಕೊಂಡು ತೆಲಂಗಾಣಕ್ಕೆ ಹೋಗಿ ಕೊಟ್ಟು ಬರುವುದೇ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನವರ ಕೆಲಸ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಜನರು ಹೇಗೆ ಬೇಕಿದ್ರೂ ಸಾಯಲಿ, ನಾವು ಮಾತ್ರ ತೆಲಂಗಾಣಕ್ಕೆ ಟೂರ್ ಹೋಗೋಣ ಅಂತ ಹೊರಟಿದ್ದಾರೆ ಇವರು ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.

ಬೆಳಗಾವಿ ಅಧಿವೇಶನ ಬಿಜೆಪಿ ಪಾಲಿಗೆ ಬಹಳ ಪ್ರಮುಖವಾಗಿದೆ. ಸರ್ಕಾರ ಬಂದು 6 ತಿಂಗಳಲ್ಲಿ 60 ತಪ್ಪು ಮಾಡಿದೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ವರ್ಗಾವಣೆ ದಂಧೆ ಆರಂಭಗೊಂಡಿದೆ. ಕಾವೇರಿ ವಿಚಾರದಲ್ಲಿ ಹಳೇ ಮೈಸೂರು ಜನರಿಗೆ ಮೋಸವಾಗಿದೆ. ನಾನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಚರ್ಚಿಸಿದ್ದೇವೆ. ನಾವಿಬ್ಬರು ಒಟ್ಟಿಗೆ ಅಧಿವೇಶನದಲ್ಲಿ ಚರ್ಚಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಮಾತೆತ್ತಿದರೆ ಕೇಂದ್ರ ಸರ್ಕಾರ ಅಂತಾರೆ

ಹಿಂದೆಂದೂ ಕಾಣದ ಬರದ ಪರಿಸ್ಥಿತಿ ಇದೆ, ಮಳೆ ಇಲ್ಲದ ಈ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇವರ ತಪ್ಪು ಮರೆಮಾಚಾಲು ಮಾತೆತ್ತಿದರೆ ಕೇಂದ್ರ ಸರ್ಕಾರ ಅಂತಾರೆ. ನಿನ್ನೆಯ ಬಾಂಬ್ ಬೆದರಿಕೆ ಸರ್ಕಾರದ ಕಾರ್ಯ ವೈಫಲ್ಯಕ್ಕೆ ಸಾಕ್ಷಿ. ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಯ ಕುರಿತು ಚರ್ಚೆ ನಡೆಸಲಿದ್ದೇವೆ. ಕಾಂತರಾಜು ವರದಿಯ ಕುರಿತು ಚರ್ಚಿಸಲಿದ್ದೇವೆ. ಉತ್ತರ ಕರ್ನಾಟಕಕ್ಕೆ ಸರ್ಕಾರ ಮಾಡಿರುವ ಮೋಸದ ಕುರಿತು ಪ್ರಶ್ನಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಅಂಬಿಕಾಪತಿ ಸಾವಿಗೆ ಬೇರೆಯೇ ಕಾರಣ ಇದೆ

ಜನಾರ್ದನ್ ರೆಡ್ಡಿ ಮೇಲೆ ಕೇಸ್ ಇದ್ದಾಗ ನಮ್ಮ ಸರ್ಕಾರ ಬಂದ್ರು ಕೂಡ ವಾಪಾಸ್ ಪಡೆಯಲಿಲ್ಲ. ಆದರೆ, ಕಾಂಗ್ರೆಸ್ ನವರು ಇಂದು ಡಿ.ಕೆ. ಶಿವಕುಮಾರ್ ವಿಚಾರದಲ್ಲಿ ಪ್ರಕರಣ ಹಿಂಪಡೆದು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಸಾವಿಗೆ ಬೇರೆಯೇ ಕಾರಣ ಇದೆ. ಆ ಕುರಿತಾಗಿ ಚರ್ಚಿಸಬೇಕಿದೆ. ನಾವು ಮತ್ತು ಜೆಡಿಎಸ್ ಒಟ್ಟಿಗೆ ಸಾಗುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES