Monday, December 23, 2024

ಇಂದು ವಿಶ್ವ ಏಡ್ಸ್ ದಿನ : ಮಹತ್ವ ಇತಿಹಾಸ ಹೀಗಿದೆ ನೋಡಿ

ಬೆಂಗಳೂರು: ಹೆಚ್​ಐವಿ ಅಥವಾ ಏಡ್ಸ್​ ವಿರುದ್ಧದ ಹೋರಾಟದಲ್ಲಿ ವಿಶ್ವವು ಸಾಧಿಸಿದ ಪ್ರಗತಿಯನ್ನು ಬಿಂಬಿಸಲು ಈ ದಿನವನ್ನು ವಿಶ್ವ ಏಡ್ಸ್ ದಿನ ಎಂದು ಆಚರಣೆ ಮಾಡಲಾಗುತ್ತದೆ.  

ಹೌದು, ಏಡ್ಸ್​ಯೆಂದರೆ ಸಾಕು ಎಲ್ಲಾರಿಗೂ ಭಯವಿತ್ತು ಅದೊಂದು ಗಂಭೀರ ಮತ್ತು ಗುಣಪಡಿಲಾಗದ ಕಾಯಿಲೆಯೆಂದು ಆತಂತದಲ್ಲಿ ಜನರು ಇದ್ದರೂ ಅಂದ್ರೆ ದಿನಕಳೆದಂತೆ ಅದರ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಜನರಿಗೆ ಮೂಡಿಸಿ ತಪ್ಪು ಕಲ್ಪನೆಯನ್ನ ಹೋಗಲಾಡಿಸಿದೆ.

ಏಡ್ಸ್​ ಹೇಗೆ ಹರಡುತ್ತದೆ..?

ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ವೈರಸ್ (H.I.V) ನಿಂದ ಉಂಟಾಗುವ ಈ ರೋಗವು ಸೋಂಕಿತ ವ್ಯಕ್ತಿಯ ಜೀವಕ್ಕೆ ಮಾರಕವಾಗಿ ಪರಿಣಾಮಿಸಬಹುದು. ಈ ಕಾಯಿಲೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಕಾರಣದಿಂದ ಈ ವೈರಸ್ ದೇಹದಲ್ಲಿ ವೇಗವಾಗಿ ಹರಡಲು ಪ್ರಾರಂಭಿಸುತ್ತದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ.

ಅಸುರಕ್ಷಿತ ಲೈಂಗಿಕತೆ, ಸೋಂಕಿತ ರಕ್ತದ ವರ್ಗಾವಣೆಯ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ಚುಚ್ಚು ಮದ್ದಿನ ಹಂಚಿಕೆಯ ಮೂಲಕ ಈ ಸೋಂಕು ಒಬ್ಬ ವ್ಯಕ್ತಿಯಿಂದ  ಇನ್ನೊಬ್ಬ ವ್ಯಕ್ತಿಗೆ ಹರಡಬಹುದು.

ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ 

ಒಂದು  ರೋಗದ ಬಗ್ಗೆ  ಹಲವು ತಪ್ಪು ಕಲ್ಪನೆಗಳಿವೆ. ಇಂದಿಗೂ ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜದಲ್ಲಿ ಬಹಳ ಕೀಳರಿಮೆಯಿಂದ ನೋಡಲಾಗುತ್ತದೆ.  ಹಾಗಾಗಿ ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು, ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಈ ರೋಗವನ್ನು ತಡೆಗಟ್ಟುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಏಡ್ಸ್ ದಿನದ ಇತಿಹಾಸ 

ವಿಶ್ವ ಏಡ್ಸ್ ದಿನವನ್ನು ಮೊದಲ ಬಾರಿಗೆ 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಏಡ್ಸ್ ಪ್ರಕರಣ ವರದಿಯಾದ ನಂತರ,  ಸುಮಾರು 25 ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಈ ಗಂಭೀರ ಕಾಯಿಲೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅಗತ್ಯವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆನ್ನುವ ಸಲುವಾಗಿ 1987 ರಲ್ಲಿ ಥಾಮಸ್ ನೆಟ್ಟರ್ ಮತ್ತು ಜೇಮ್ಸ್ ಡಬ್ಲ್ಯೂ ಬನ್ ಅವರು ಏಡ್ಸ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಜಾರಿಗೆ ತಂದರು. ಅದರ ಮಾರನೇ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು  ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಮೂಲಕ ಪ್ರತಿಯೊಂದು ದೇಶದ ಸರ್ಕಾರಗಳು ಈ ರೋಗದ ಹರಡುವಿಕೆ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ವಿಶ್ವ ಏಡ್ಸ್ ದಿನದ ಮಹತ್ವ 

ಏಡ್ಸ್ ರೋಗದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಈ ರೋಗಕ್ಕೆ ತುತ್ತಾದವರು  ಸಮಾಜದಲ್ಲಿ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸುವಂತಾಗಬೇಕು ಮತ್ತು ಈ ರೋಗದ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕೆಂದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ದಿನ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ.

RELATED ARTICLES

Related Articles

TRENDING ARTICLES