Wednesday, January 22, 2025

ದಿನ ಭವಿಷ್ಯ : ಡಿಸೆಂಬರ್‌ನ ಮೊದಲ ದಿನವಾದ ಇಂದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

ಡಿಸೆಂಬರ್ 1ರ ಶುಕ್ರವಾರವಾದ ಇಂದು,ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿಂದೆ.

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ,ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅಪಾಯ, ಉದ್ಯೋಗದಲ್ಲಿ ಆಲಸ್ಯವಿರುತ್ತದೆ.ಇಂದು ನೀವು ನಿಮ್ಮ ಸಂಜೆಯ ಸಮಯವನ್ನು ನಿಮ್ಮ ಪೋಷಕರ ಸೇವೆಯಲ್ಲಿ ಕಳೆಯುತ್ತೀರಿ. ಯೋಗ ಪ್ರಾಣಾಯಾಮ ಅಭ್ಯಾಸ ಮಾಡಿ.

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ವಾಹನ ಗೃಹ ಮತ್ತು ಸ್ಥಳ ಬದಲಾವಣೆ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ. ವಿಷ್ಣುವಿನ ಮಂತ್ರವನ್ನು 108 ಬಾರಿ ಜಪಿಸಿ.

ಮಿಥುನ: ಆರ್ಥಿಕ ಮತ್ತು ಕೌಟುಂಬಿಕವಾಗಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಬದಲಾವಣೆಯಿಂದ ಸಂಕಷ್ಟ.ಇಂದು ನೀವು ನಿಮ್ಮ ವ್ಯರ್ಥ ಖರ್ಚು ಅಭ್ಯಾಸಗಳನ್ನು ನಿಲ್ಲಿಸಬೇಕಾಗುತ್ತದೆ, ಆಗ ಮಾತ್ರ ನಿಮ್ಮ ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಸಿದವರಿಗೆ ಆಹಾರ ನೀಡಿ.

ಕಟಕ: ಅಧಿಕ ಧನಾಗಮನ, ಮಕ್ಕಳಿಂದ ಕಿರಿಕಿರಿ, ಋಣ ರೋಗ ಬಾಧೆಗಳಿಂದ ಮುಕ್ತಿ. ಗಣೇಶನಿಗೆ ಇಂದು ಲಡ್ಡುಗಳನ್ನು ಅರ್ಪಿಸಿ.

ಸಿಂಹ: ಅನಗತ್ಯ ಖರ್ಚು, ಮನೋರೋಗಗಳು, ನಿದ್ರಾ ಭಾವ, ಮಕ್ಕಳಿಂದ ಖರ್ಚು. ಈ ದಿನ ತಾಯಿ ಸರಸ್ವತಿಯನ್ನುಆರಾಧಿಸಿ.

ಕನ್ಯಾ: ಆರ್ಥಿಕ ಸಮಸ್ಯೆ ಅಧಿಕ, ಸ್ಥಿರಾಸ್ತಿ ನಷ್ಟ, ಮಿತ್ರರನ್ನು ಕಳೆದುಕೊಳ್ಳುವ ಸಂದರ್ಭ, ಸಹೋದರಿಯಿಂದ ಅನುಕೂಲ.ಹಳದಿ ವಸ್ತುಗಳನ್ನು ದಾನ ಮಾಡಿ.

ತುಲಾ: ಉದ್ಯೋಗ ವ್ಯಾಪಾರ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.ಇಂದು ನೀವು ಸಂಜೆಯ ಸಮಯವನ್ನು ನಿಮ್ಮ ಮಕ್ಕಳ ಸಮಸ್ಯೆಗಳನ್ನು ಆಲಿಸುವಿರಿ. ಪೋಷಕರ ಆಶೀರ್ವಾದ ಪಡೆಯಿರಿ.

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ.ಸರ್ಕಾರಿ ಉದ್ಯೋಗದಲ್ಲಿರುವ ಜನರು ಇಂದು ಕಚೇರಿಯಲ್ಲಿ ಕೆಲವು ಅನಾನುಕೂಲತೆಗಳನ್ನು ಎದುರಿಸಬೇಕಾಗಬಹುದು. ಮೀನುಗಳಿಗೆ ಆಹಾರ ನೀಡಿ

ಧನಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ, ನೀರಿನಿಂದ ತೊಂದರೆ ಎಚ್ಚರ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ, ಬಂಧುಗಳು ದೂರ, ನಿದ್ರಾ ಭಾವ. ಸಂಜೆ ವೇಳೆ ನಿಮಗೆ ಹೊಟ್ಟೆನೋವು, ಸುಸ್ತು, ತಲೆನೋವು, ಜ್ವರ ಮುಂತಾದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ.

ಮಕರ: ದೈವ ಕಾರ್ಯಗಳಿಗಾಗಿ ಖರ್ಚು, ಮಿತ್ರರಿಂದ ಕಿರಿಕಿರಿ, ದಾಂಪತ್ಯದಲ್ಲಿ ಸಮಸ್ಯೆ ಅಧಿಕ.ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಸಮತೋಲನ, ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ನಿರಾಸಕ್ತಿ. ನಿರ್ಗತಿಕರಿಗೆ ಸಹಾಯ ಮಾಡಿ.

ಮೀನ: ಸಹೋದ್ಯೋಗಿಗಳೇ ಶತ್ರುಗಳಾಗಿ ಪರಿವರ್ತನೆ, ವ್ಯವಹಾರಕ್ಕಾಗಿ ಸಾಲ ಮಾಡುವ ಸನ್ನಿವೇಶ, ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.ಬಡವರಿಗೆ ದಾನ ಮಾಡಿ.

 

 

RELATED ARTICLES

Related Articles

TRENDING ARTICLES