Wednesday, January 22, 2025

ಆಸ್ಟ್ರೇಲಿಯಾಗೆ ಸೋಲು : ಸರಣಿ ಗೆದ್ದು ಬೀಗಿದ ಭಾರತ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ ತಂಡ 20 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿಯುವ ಮೂಲಕ 5 ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿಯಿರುವಾಗಲೇ (3 ಪಂದ್ಯಗಳನ್ನು ಗೆದ್ದು) ಸರಣಿ ವಶಪಡಿಸಿಕೊಂಡಿತು.

ಭಾರತ ನೀಡಿದ್ದ 175 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಅಕ್ಷರ್ ಪಟೇಲ್ 3, ದೀಪಕ್ ಚಹರ್ 2, ಅವೇಶ್ ಖಾನ್ ಹಾಗೂ ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್​ ಗಳಿಸಿತು. ಯಶಸ್ವಿ ಜೈಸ್ವಾಲ್ 37, ಋತುರಾಜ್ ಗಾಯಕ್ವಾಡ್ 32, ರಿಂಕು ಸಿಂಗ್ 46, ಜಿತೇಶ್ ಶರ್ಮಾ 35 ರನ್​ ಸಿಡಿಸಿದರು. ಆಸ್ಟ್ರೇಲಿಯಾ ಪರ ಬೆನ್ ಮೆಕ್‌ಡರ್ಮಾಟ್ 3, ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ತನ್ವೀರ್ ಸಂಘ ತಲಾ 2, ಆರನ್ ಹಾರ್ಡಿ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES