Wednesday, January 22, 2025

ಸಲಾರ್ ಟ್ರೈಲರ್ ರಿಲೀಸ್ : 3 ನಿಮಿಷ 47 ಸೆಕೆಂಡ್​ಗಳ ಟ್ರೈಲರ್​ನಲ್ಲಿ ಪ್ರಭಾಸ್ ರೌದ್ರಾವತಾರ

ಬೆಂಗಳೂರು : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಲಾರ್ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ರಿಲೀಸ್ ಆದ 20 ನಿಮಿಷದಲ್ಲೇ 2.2 ಮಿಲಿಯನ್ ವೀಕ್ಷಣೆ ಕಂಡಿದೆ.

ಡಾರ್ಲಿಂಗ್ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಸಿನಿಮಾ ಎನ್ನುವುದಕ್ಕಿಂತ ಕೆಜಿಎಫ್​ ನಿರ್ದೇಶಕ ಕನ್ನಡಿಗೆ ಪ್ರಶಾಂತ್ ನೀಲ್ ಸಿನಿಮಾ ಎನ್ನುವ ಕಾರಣಕ್ಕೆ ನಿರೀಕ್ಷೆ ಮೂಡಿಸಿದೆ.

ಈ ಚಿತ್ರ ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆ ಒಳಗೊಂಡಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ರಿವೀಲ್ ಮಾಡಿದ್ದಾರೆ. ಈ ಚಿತ್ರವೂ ಇದೇ ಡಿಸೆಂಬರ್ 22ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ.

3 ನಿಮಿಷ 47 ಸೆಕೆಂಡ್​​ಗಳ ಟ್ರೈಲರ್

3 ನಿಮಿಷ 47 ಸೆಕೆಂಡ್​​ಗಳ ಟ್ರೈಲರ್​ನುದ್ದಕ್ಕೂ ಌಕ್ಚನ್, ಎಮೋಷನ್ ಬೆರೆತ ರೋಚಕ ರೋಮಾಂಚಕ ದೃಶ್ಯಗಳಿವೆ. ಸಲಾರ್ ಸಿನಿಮಾ ಅದೆಷ್ಟು ಅದ್ಧೂರಿಯಾಗಿ ರೋಚಕವಾಗಿರಲಿದೆ ಎನ್ನುವುದರ ಸೂಚನೆ ಕೊಡ್ತಾ ಇದೆ ಈ ಟ್ರೈಲರ್.

ಸಲಾರ್​​ನಲ್ಲಿ ಪ್ರಭಾಸ್ ಜೊತೆ ಶೃತಿ ಹಾಸನ್ ನಾಯಕಿಯಾದ್ರೆ, ಪ್ರಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಭುವನ್ ಗೌಡ ಸಿನಿಮಾಟೋಗ್ರಫಿ, ರವಿ ಬಸ್ರೂರು ಮ್ಯೂಸಿಕ್ ಚಿತ್ರಕ್ಕಿದ್ದು ಬಹುತೇಕ ಕೆಜಿಎಫ್​ಗೆ ಕೆಲಸ ಮಾಡಿದ ತಂತ್ರಜ್ಞರೇ ಸಲಾರ್​ಗೂ ಕೆಲಸ ಮಾಡಿದ್ದಾರೆ.

ಟ್ರೈಲರ್ ಲಿಂಕ್ ಇಲ್ಲಿದೆ : https://youtu.be/4GPvYMKtrtI?si=T0VH64uuW6QPMqAz

RELATED ARTICLES

Related Articles

TRENDING ARTICLES