Wednesday, January 22, 2025

ಆಸ್ಟ್ರೇಲಿಯಾಗೆ 175 ರನ್​ಗಳ ಟಾರ್ಗೆಟ್ ನೀಡಿದ ಭಾರತ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ 174 ರನ್​ಗಳ ಕಠಿಣ ಮೊತ್ತ ಕಲೆಹಾಕಿದೆ. ಮೂಲಕ ಆಸ್ಟ್ರೇಲಿಯಾಗೆ 175 ರನ್​ಗಳ ಟಾರ್ಗೆಟ್ ನೀಡಿತು.

ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್​ ಗಳಿಸಿತು.

ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 37, ಋತುರಾಜ್ ಗಾಯಕ್ವಾಡ್ 32, ರಿಂಕು ಸಿಂಗ್ 46, ಜಿತೇರ್ಶ ಶರ್ಮಾ 35 ರನ್​ ಸಿಡಿಸಿದರು. ಆಸ್ಟ್ರೇಲಿಯಾ ಪರ ಬೆನ್ ಮೆಕ್‌ಡರ್ಮಾಟ್ 3, ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ತನ್ವೀರ್ ಸಂಘ ತಲಾ 2, ಆರನ್ ಹಾರ್ಡಿ ಒಂದು ವಿಕೆಟ್ ಪಡೆದರು.

ಭಾರತಕ್ಕೆ ರಿಂಕು, ಜಿತೇಶ್ ಶರ್ಮಾ ಆಸರೆ

ತಿಲಕ್ ವರ್ಮಾ ಬದಲಿಗೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದ ಶ್ರೇಯಸ್​ ಅಯ್ಯರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 7 ಎಸೆತಗಳಲ್ಲಿ ಕೇವಲ 8 ರನ್​ ಗಳಿಸಿ ನಿರ್ಗಮಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 1 ರನ್​ ಗಳಿಸಿದರು. ಈ ವೇಳೆ ಜೊತೆಯಾದ ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ ಜವಾಬ್ದಾರಿಯುತ ಆಟವಾಡಿದರು. 19 ಎಸೆತಗಳನ್ನು ಎದುರಿಸಿದ ಜಿತೇಶ್ ಶರ್ಮಾ 3 ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನೊಂದಿಗೆ 35 ರನ್ ಸಿಡಿಸಿದರು. 29 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 46 ರನ್​ ಗಳಿಸಿ ಔಟಾದರು.

RELATED ARTICLES

Related Articles

TRENDING ARTICLES