Sunday, January 19, 2025

ಪ್ರೀತಿಸುವುದು ತಪ್ಪಲ್ಲ, ಪೋಷಕರ ಮನಸ್ಸು ನೋಯಿಸುವುದು ತಪ್ಪು : ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು : ಪ್ರೀತಿಸುವುದು ತಪ್ಪಲ್ಲ, ಪೋಷಕರ (ತಂದೆ-ತಾಯಿ) ಮನಸ್ಸು ನೋಯಿಸುವುದು ತಪ್ಪು ಎಂದು ಯುವಜನತೆಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕಿವಿಮಾತು ಹೇಳಿದ್ದಾರೆ.

ಈ ಕುರಿತು ಪವರ್​ ಟಿವಿಗೆ ತಮ್ಮ ಆಶೀರ್ವಚನ ನೀಡಿರುವ ಶ್ರೀಗಳು, ಆಧುನಿಕ ಯುಗದಲ್ಲಿ ನಾವು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಾ ಸಾಗುತ್ತಿದ್ದೇವೆ. ಇದು ಮುಂದಿನ ಪೀಳಿಗೆಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತಿದ್ದೇವೆ ಎಂದು ಬೇಸರಿಸಿದ್ದಾರೆ.

ಆಧುನಿಕತೆಯಲ್ಲಿ ನಾವು ಮುಂದುವರಿಯೋಣ. ಆದರೆ, ನಮ್ಮ ಈ ಸಂಬಂಧಗಳನ್ನು ಮತ್ತು ಪರಂಪರೆಯನ್ನು ತೊರೆದು ಅಲ್ಲ, ಅದರ ಜೊತೆಯಾಗಿ ಸಾಗೋಣ. ಇಂದಿನ ಯುವ ಪೀಳಿಗೆ ಪೀಳಿಗೆ ಪ್ರೀತಿ ಎಂಬ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ತಮ್ಮ ಜೀವನವನ್ನೇ ಅಂಧಕಾರದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಪ್ರೀತಿಸುವುದು ತಪ್ಪಲ್ಲ, ತಂದೆ-ತಾಯಿಯರ ಮನಸ್ಸು ನೋಯಿಸುವುದು ತಪ್ಪು ಎಂದು ಯುವ ಮನಸ್ಸುಗಳಿಗೆ ಸಲಹೆ ನೀಡಿದ್ದಾರೆ.

ವಿಚ್ಛೇಧನ, ಆತ್ಮಹತ್ಯೆ, ಕೊಲೆಗೆ ದಾರಿ?

ಮನಸ್ಸಿನೊಂದಿಗೆ ಒಂದಾಗುವುದೇ ನಿಜವಾದ ಪ್ರೀತಿ

ಯುವ ಪೀಳಿಗೆಯೇ ಹೆತ್ತವರ ಬಗ್ಗೆ ಸ್ವಲ್ಪ ಯೋಚಿಸಿ

ಕುಟುಂಬದ ಬಗ್ಗೆಯೂ ಕಾಳಜಿ ಇರಲಿ

ಇಂದಿನ ಯುವ ಪೀಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿಯಲ್ಲಿಯೇ ಪ್ರೀತಿಯನ್ನು ಮಾಡುತ್ತಾರೆ. ಈ ಮೂಲಕ ವಿದ್ಯಾಭ್ಯಾಸದಲ್ಲಿ ಕುಂಠಿತವನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಜೀವನದಲ್ಲಿ ಅದೆಷ್ಟೋ ತಪ್ಪು ನಿರ್ಧಾರಗಳು ಉಂಟಾಗುತ್ತಲಿವೆ. ಎಷ್ಟೋ ವಿವಾಹ ವಿಚ್ಛೇಧನಗಳು, ಆತ್ಮಹತ್ಯೆಗಳು, ಕೊಲೆಗಳು ಇನ್ನೂ ಮುಂತಾದ ಅಚಾತುರ್ಯಗಳು ಸಹ ಇದರಿಂದ ಉಂಟಾಗುತ್ತಲಿವೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES