Wednesday, January 22, 2025

ಸ್ಪೀಕರ್ ಪೀಠಕ್ಕೆ ಅಗೌರವ ತೋರುವ ವ್ಯಕ್ತಿಗಳಿಂದಲೇ ಬಾಂಬ್ ಬೆದರಿಕೆ ಬರ್ತಿದೆ : ಮುನಿರತ್ನ

ಬೆಂಗಳೂರು : ಸ್ಪೀಕರ್ ಪೀಠಕ್ಕೆ ಇಂತಹ ಅಗೌರವ ತೋರುವ ವ್ಯಕ್ತಿಗಳಿಂದಲೇ ಬಾಂಬ್ ಬೆದರಿಕೆ ಬರ್ತಿದೆ ಎಂದು ಮಾಜಿ ಸಚಿವ ಮುನಿರತ್ನ ಅವರು ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಹೆಸರು ಪ್ರಸ್ತಾಪಿಸಿದರು.

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಬಂತು ಅವತ್ತೇ ಇದೆಲ್ಲ ಶುರುವಾಯಿತು. ಅಲ್ಲಿಂದ ಇವೆಲ್ಲವೂ ಶುರುವಾಗಿದೆ. ಹುಲಿ ಬಂತು ಹುಲಿ ಕಥೆ ಶುರುವಾಗಿದೆ. ಹೇಳಿ ಹೇಳಿ ಒಂದು ದಿನ ನಿಜ ಮಾಡ್ತಾರೆ. ಬಾಂಬ್ ಇಡೋರಿಗೆ ಇಲ್ಲಿಂದಲೇ ಕುಮ್ಮಕ್ಕು ಹೋಗ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತ ಹೇಳಲ್ಲ ಯಾವ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಬಂತು ಅವತ್ತೇ ಇದೆಲ್ಲ ಶುರುವಾಯಿತು ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಪೀಕರ್ ಕುರ್ಚಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸ್ಪೀಕರ್ ಕೂರುವ ಜಾಗದಲ್ಲಿ ಅಶೋಕ್ ಸ್ಥಂಭ, ಸೂರ್ಯ, ಚಂದ್ರ ಇದೆ. ಕುರ್ಚಿಗೆ ಕೂರುವ ವ್ಯಕ್ತಿಗೆ ಗೌರವ ಕೊಡ್ತೀವೋ ಇಲ್ಲವೋ, ಆ ಅಶೋಕ ಸ್ಥಂಭ, ಸೂರ್ಯ, ಚಂದ್ರ ಇವುಗಳಿಗಂತೂ ಕೈ ಮುಗೀತೀವಿ ಎಂದು ಸಚಿವ ಜಮೀರ್ ಅಹ್ಮದ್​ಗೆ ತಿರುಗೇಟು ನೀಡಿದರು.

ತೆಲಂಗಾಣದಲ್ಲಿ ಅಚ್ಚರಿ ಫಲಿತಾಂಶ

ತೆಲಂಗಾಣ ಚುನಾವಣೆಯ ಎಕ್ಸಿಟ್ ಪೋಲ್ ಬಂದಿದೆ. ಅದೆಲ್ಲಾ ಸತ್ಯಕ್ಕೆ ದೂರವಾದದ್ದು. ತೆಲಂಗಾಣದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ನಾವು ಸರ್ಕಾರ ರಚನೆ ಮಾಡ್ತೀವಿ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ತಂತ್ರ ಫಲಿಸುವುದಿಲ್ಲ. ಸಮೀಕ್ಷೆ ಬಗ್ಗೆ ನಾವು ಮಾತನಾಡಲ್ಲ. ಅವಕ್ಕೆ ‌ಎಷ್ಟು ಹಿನ್ನೆಡೆ ಆಗಿದೆ ನಿಮಗೆ ಗೊತ್ತಿದೆ ಎಂದು ಹೇಳಿದರು.

ಕರ್ನಾಟಕ ಜನತೆಗೆ ಗ್ಯಾರಂಟಿ ವಂಚನೆ ಆಗಿದೆ

ಕರ್ನಾಟಕ ಜನತೆಗೆ ಗ್ಯಾರಂಟಿ ವಂಚನೆ ಆಗಿದೆ. ಐದು ಗ್ಯಾರಂಟಿಯಲ್ಲಿ ಒಂದು ಬಾಕಿ ಇದೆ. ಐದು ಗಂಟೆ ಕರೆಂಟ್ ಕೊಡ್ತಿದ್ದೀನಿ ಅಂದಿದ್ದಾರೆ. ನಮ್ಮ‌ ರಾಜ್ಯದಲ್ಲಿ 24 ಗಂಟೆ ಕರೆಂಟ್ ಕೊಡ್ತಿದ್ದೀವಿ ಅಂತ ಇಲ್ಲಿನ ಡಿಸಿಎಂಗೆ, ಅಲ್ಲಿನ ಸಿಎಂ ಹೇಳಿದ್ದಾರೆ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES