ಬೆಂಗಳೂರು : ಕಳೆದ ಸುಮಾರು ಆರು ತಿಂಗಳುಗಳಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಹಲವಾರು ಮಹಿಳೆಯರ ಹತ್ಯೆಯ ವರದಿಯಾಗಿದ್ದು, ಇದೀಗ ಉತ್ತರ ಪ್ರದೇಶ ಪೊಲೀಸರು ಹುಡುಕಾಟದಲ್ಲಿದ್ದಾರೆ.
ಇಲ್ಲಿಯವರೆಗೆ ಸುಮಾರು ಒಂಬತ್ತು ಮಹಿಳೆಯರ ಹತ್ಯೆ ಮಾಡಲಾಗಿದೆ. ಆದರೆ, ಇದುವರೆಗೂ ಆರೋಪಿಗಳ ಪತ್ತೆ ಮಾತ್ರ ಆಗಿಲ್ಲ. ಪೊಲೀಸರ ಪ್ರಕಾರ ಈ ಹತ್ಯೆಯ ಹಿಂದೆ ಓರ್ವ ವ್ಯಕ್ತಿಯ ಅಥವಾ ಒಂದು ಗುಂಪಿನ ಕೈವಾಡ ಇರಬಹುದು ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬರೇಲಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು, ಆರೋಪಿಗಳು ಸಿಗುವವರೆಗೆ ಗ್ರಾಮದ ಮಹಿಳೆಯರು ಹಗಲು ಅಥವಾ ರಾತ್ರಿ ಹೊತ್ತು ಒಬ್ಬಂಟ್ಟಿಯಾಗಿ ತಿರುಗಬಾರದು, ಬಲಿಪಶುಗಳಲ್ಲಿ 50 ರಿಂದ 65 ವರ್ಷ ವಯಸ್ಸಿನವರೇ ಹೆಚ್ಚಿನವರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪಾಪಿ ಗಂಡ
ಸರಣಿ ಕೊಲೆಗೆ ಕಾರಣವೇನು?
ಆರೋಪಿಯು ಕೊಲೆಯಾದ ಮಹಿಳೆಯರನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ. ದರೋಡೆಗಾಗಿ ಅಥವಾ ಲೈಂಗಿಕ ಕಿರುಕುಳ ನೀಡಲು ಮಾಡಿರುವ ಕೊಲೆಗಳು ಅಲ್ಲ ಎಂದು ಹೇಳಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.