Monday, December 23, 2024

ಮದುವೆಗೆ ಒಪ್ಪದ ಶಿಕ್ಷಕಿ : ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್

ಹಾಸನ: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ದುರುಳರು ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ.

ಹೌದು,ಮದುವೆಗೆ ಒಪ್ಪಂದ ಕಾರಣ ಶಿಕ್ಷಕಿಯನ್ನ ಇವರ ಸಂಬಂಧಿ ರಾಮು ಅಪಹರಿಸುವ ಆರೋಪ ಕೇಳಿ ಬಂದಿದೆ.

15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ. ಮದುವೆ ಒಪ್ಪದ ಹಿನ್ನೆಲೆಯಲ್ಲಿ ಇಂದು (ನ.30) ಬೆಳಗ್ಗೆ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಆರೋಪ ಕೇಳಿಬಂದಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಇಂದು 262 ಹೊಸ ಆ್ಯಂಬುಲೆನ್ಸ್‌ಗಳು ಲೋಕಾರ್ಪಣೆ!

ನಿಮ್ಮ ಮಗಳನ್ನು ಮದವೆ ಮಾಡಿಕೊಡಿ ಎಂದು ರಾಮು ಮತ್ತು ಆತನ ಪೋಷಕರು ಕೇಳಲು ಬಂದಿದ್ದರು. ಆದರೆ ನಾವು ಕೊಡಲ್ಲ ಅಂತ ಹೇಳಿ ಕಳಿಸಿದ್ವಿ. ಕೊಡಲ್ಲ ಅಂದಿದ್ದಕ್ಕೆ ನನ್ನ ಮಗಳನ್ನ ಅಪರಣ ಮಾಡಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅರ್ಚಕರ ಕುಟುಂಬಗಳಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ಅರ್ಚಕರ ಮಕ್ಕಳಿಗೆ ಹುದ್ದೆ!

ಘಟನಾ ಸ್ಥಳಕ್ಕೆ ಹಾಸನ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ ಮಾಡಲಾಗಿದೆ. ಸಂಬಂಧಿ ರಾಮು ಅಪಹರಣ ಮಾಡಿದ್ದಾನೆ ಎಂದು ಅರ್ಪಿತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ಹೇಳಿದರು.

RELATED ARTICLES

Related Articles

TRENDING ARTICLES