ನೇಪಾಳ: ಸುಪ್ರೀಂಕೋರ್ಟ್ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಐದು ತಿಂಗಳ ನಂತರ ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದ್ದು ಹಾಗೆ ಮಾಡಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ.
ಟ್ರಾನ್ಸ್-ವುಮನ್ 35 ವರ್ಷದ ಮಾಯಾ ಗುರುಂಗ್ ಮತ್ತು 27 ವರ್ಷದ ಸುರೇಂದ್ರ ಪಾಂಡೆ ಸಲಿಂಗಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ ಎಂದು ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ!
ನೇಪಾಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಈ ಸಂಸ್ಥೆ ಕೆಲಸ ಮಾಡುತ್ತದೆ. 2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು. 2015ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.