Monday, December 23, 2024

ವೃದ್ಧನಿಗೆ ಬೈಕ್ ಡಿಕ್ಕಿ, ಮಹಿಳೆ ಮೇಲೆ ಹರಿದ ಬಸ್!

ಬೆಳಗಾವಿ: ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ಮೂಲದ ವಿದ್ಯಾಶ್ರೀ ಮೃತ ದುರ್ದೈವಿ. ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ ಪಕ್ಕದಲ್ಲಿ ದಿನಸಿ ಹೊತ್ತು ಹೊರಟಿದ್ದ ವೃದ್ಧನಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ವೃದ್ಧನ ಚೀಲಕ್ಕೆ ಬೈಕ್‌ನಲ್ಲಿ ಕುಳಿತಿದ್ದ ವಿದ್ಯಾಶ್ರೀ ಕೈತಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಕ್ರದಡಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಭ್ರೂಣಲಿಂಗ ಪತ್ತೆ; ಮಾತಾ ಆಸ್ಪತ್ರೆಯ ಕರೆಂಟ್ ಕಟ್!

ಬೈಕ್ ಸವಾರ ಹೆಲ್ಮೆಟ್​ ಹಾಕಿದ್ದರಿಂದ ಬಚಾವ್ ಆಗಿದ್ದಾರೆ. ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ವಿದ್ಯಾಶ್ರೀ ಬಂದಿದ್ದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES