Thursday, November 21, 2024

ಪದವಿ ವಿದ್ಯಾರ್ಥಿಗಳ PUC ಮಾರ್ಕ್ಸ್ ಕಾರ್ಡ್​ಗಳು ಮಾಯ, ವಿದ್ಯಾರ್ಥಿಗಳು ಶಾಕ್​

ಯಾದಗಿರಿ : ಡಿಗ್ರಿ ಕಾಲೇಜಿನ ಪ್ರವೇಶಾತಿಗೆ ನೀಡಿದ್ದ ವಿದ್ಯಾರ್ಥಿಗಳ PUC ಮಾರ್ಕ್ಸ್​ ಕಾರ್ಡ್​ಗಳು ನಾಪತ್ತೆಯಾಗಿದ್ದು, ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. 159ಕ್ಕೂ ಹೆಚ್ಚು ವಿದ್ಯಾರ್ಥಿಗಳ PUC ಮಾರ್ಕ್ಸ್ ಕಾರ್ಡ್​ಗಳು ಮಂಗಮಾಯವಾಗಿವೆ. ಪದವಿ ಮುಗಿಸಿ ಬೇರೆ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ತಯಾರಿ ನಡಸಿದ್ದ ವಿದ್ಯಾರ್ಥಿಗಳು ಶಾಕ್​ ಆಗಿದ್ದಾರೆ.

ಇನ್ನು ಈ ಕುರಿತು ಕಾಲೇಜು ಪ್ರಾಂಶುಪಾಲರನ್ನು ಕೇಳಿದ್ರೆ ನಮಗೆ ವಿವಿ ಮಾರ್ಕ್ಸ್‌ ಕಾರ್ಡ್‌ ಕಳಿಸಿಲ್ಲ ಎಂದು ಹಾರಿಕೆ ಉತ್ತರ ನೀಡ್ತಿದ್ದಾರಂತೆ. ಆದರೆ, ವಿವಿಯಲ್ಲಿ ಕಸದ ತೊಟ್ಟಿಯಂತೆ ಮಾರ್ಕ್ಸ್ ಕಾರ್ಡ್‌ಗಳು ಬಿದ್ದಿವೆ. ಆದರೂ ಇವನ್ನು ವಿದ್ಯಾರ್ಥಿಗಳಿಗೆ ವಾಪಸ್​ ನೀಡುವ ಕಾರ್ಯ ಮಾಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ವಿವಿ ಹಾಗೂ ಕಾಲೇಜು ಆಡಳಿತ ಮಂಡಳಿ ಚೆಲ್ಲಾಟವಾಡ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಪವರ್ ವರದಿ ಬಳಿಕ ವಸತಿ ನಿಲಯಕ್ಕೆ DHO ಭೇಟಿ

ಯಾದಗಿರಿ ಜಿಲ್ಲೆಯ ವಸತಿ ಶಾಲೆ ಮಕ್ಕಳಿಗೆ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು, ಈ ಕುರಿತು ಪವರ್​ ಟಿವಿ ಸುದ್ದಿ ಪ್ರಸಾರ ಮಾಡ್ತಿದ್ದಂತೆ ಜಿಲ್ಲಾ ವೈದ್ಯಾಧಿಕಾರಿ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮಕ್ಕಳಲ್ಲಿ ವಿಚಿತ್ರ ಚರ್ಮ ರೋಗ ಪತ್ತೆಯಾಗಿದ್ದು, ಪವರ್ ಟಿ ವಿ ಸುದ್ದಿ ಬಿತ್ತರಿಸಿದ ಕೇವಲ ಎರಡೂ ಗಂಟೆ ಒಳಗಾಗಿ ಜಿಲ್ಲಾ ವೈದ್ಯಾಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಎಲ್ಲಾ ಮಕ್ಕಳನ್ನು ಒಟ್ಟಿಗೆ ಸೇರಿಸಿ ವೈದ್ಯಾಧಿಕಾರಿಗಳ ತಂಡ ಸಮಸ್ಯೆ ಆಲಿಸಿದ್ದಾರೆ.

RELATED ARTICLES

Related Articles

TRENDING ARTICLES