ಕಲಬುರಗಿ : ನಾನು ಶಾಸಕ ಬಿ.ಆರ್. ಪಾಟೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿಲ್ಲ ಎಂದ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ವಿಚಾರಕ್ಕೆ ಬಿ.ಆರ್. ಪಾಟೀಲ್ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ವಲ್ಪ ಕನ್ನಡದ ಗ್ರಾಮರ್ ಓದಿದ್ದೇನೆ. ಅವರು ಇಂಗ್ಲಿಷ್ನಲ್ಲಿ ಮಾತಾಡ್ತಾರೆ. ಅವರು ಹೇಳಿದ್ದು ಅಪಾರ್ಥವಲ್ಲ. ಸದನದಲ್ಲಿ ಮಾತಾಡಿರೋದನ್ನ ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಅಸಮಾಧಾನ ಕೃಷ್ಣ ಬೈರೇಗೌಡ ವಿರುದ್ಧ ಮಾತ್ರ ಎಂದು ತಿಳಿಸಿದ್ರು. ಇನ್ನು ಪ್ರಿಯಾಂಕ್ ಖರ್ಗೆ ತನಿಖೆ ಮಾಡಿಸುವ ವಿಚಾರ ಕುರಿತು ಮಾತನಾಡಿದ ಅವರು, ತನಿಖೆ ಮಾಡಿಸಲಿ. ತನಿಖೆಯಲ್ಲಿ ಸಾಬೀತಾದ್ರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ನನಗೆ ಕೊಡಬಾರದ ನೋವು, ಹಿಂಸೆ ಕೊಟ್ಟಿದ್ದಾರೆ : ಡಿ.ಕೆ. ಶಿವಕುಮಾರ್
ಕೃಷ್ಣ ಬೈರೇಗೌಡ ಹೇಳಿದ್ದೇನು?
ತನಿಖೆ ಬಳಿಕ ಸದನಕ್ಕೆ ಹಾಜರಾಗ್ತೀನಿ ಎಂಬ ಶಾಸಕ ಬಿ. ಆರ್. ಪಾಟೀಲ್ ಹೇಳಿಕೆ ವಿಚಾರಕ್ಕೆ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಆ ಇಲಾಖೆ ನನಗೆ ಬರಲ್ಲ, ಪತ್ರನೂ ಸಿಎಂಗೆ ಬರೆದಿದ್ದಾರೆ. ತನಿಖೆ ಮಾಡೋದು ಅವರಿಗೆ ಬಿಟ್ಟಿದ್ದು. ತನಿಖೆ ಬಗ್ಗೆ ಪ್ರತಿಕ್ರಿಯೆ ನೀಡೋದು ಪ್ರಸ್ತುತವಲ್ಲ. ಇಲಾಖೆ ಮಂತ್ರಿ, ಸಿಎಂ ಏನು ತೀರ್ಮಾನ ಮಾಡ್ತಾರೆ ಅದನ್ನು ಜಾರಿ ಮಾಡ್ತೀವಿ ಎಂದು ಹೇಳಿದ್ದಾರೆ.