ಉತ್ತರಾಖಂಡ : ಸಿಲ್ಕ್ಯಾರಾ ಸುರಂಗದಲ್ಲಿ ಸುಮಾರು 17 ದಿನಗಳಿಂದ ಸಿಕ್ಕಿಬಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣೆ ಕಾರ್ಯಾಚರಣೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ಲಾಘಿಸಿದ್ದು, ಇದು ದೇಶದ ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ ಎಂದು ಪೋಸ್ಟ್ ನಲ್ಲಿ ಹೇಳಿದಿದ್ದಾರೆ.
ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ನಡೆದ ಅವಿರತ ಪ್ರಯತ್ನ: ಸಿಎಂ ಸಿದ್ದರಾಮಯ್ಯ ಪ್ರಶಂಸೆ!
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರ್ಮಿಕರ ಸ್ಥಿತಿಸ್ಥಾಪಕತ್ವವನ್ನು ರಾಷ್ಟ್ರವು ವಂದಿಸುತ್ತದೆ. ನಿರ್ಣಾಯಕ ಮೂಲಸೌಕರ್ಯವನ್ನು ನಿರ್ಮಿಸುವುದಕ್ಕಾಗಿ ಅವರಿಗೆ ಕೃತಜ್ಞರಾಗಿರಬೇಕು ಎಂದು ಮುರ್ಮು ಹೇಳಿದರು.
ಇತಿಹಾಸದಲ್ಲಿ ಅತ್ಯಂತ ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದನ್ನು ಅದ್ಭುತವಾಗಿ ನಿರ್ವಹಿಸಿದ ತಂಡಗಳು ಮತ್ತು ಎಲ್ಲಾ ತಜ್ಞರನ್ನು ನಾನು ಅಭಿನಂದಿಸುತ್ತೇನೆ ಎಂದು ಮುರ್ಮು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
I feel relieved and happy to learn that all the workers trapped in a tunnel in Uttarakhand have been rescued. Their travails over 17 days, as the rescue effort met with obstacles, have been a testament of human endurance. The nation salutes their resilience and remains grateful…
— President of India (@rashtrapatibhvn) November 28, 2023