Tuesday, November 5, 2024

ನಿಮ್ಹಾನ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ? : ಆಸ್ಪತ್ರೆ ಆವರಣದಲ್ಲೇ ಉಸಿರು ಚೆಲ್ಲಿದ ಕಂದಮ್ಮ

ಬೆಂಗಳೂರು : ತಲೆಗೆ ತೀವ್ರ ಪೆಟ್ಟಾದ ಮಗುವನ್ನ ಹಾಸನದ ಜಿಲ್ಲಾಸ್ಪತ್ರೆಯಿಂದ ಕೇವಲ ಎರಡೇ ಗಂಟೆಯಲ್ಲಿ ಬೆಂಗಳೂರಿಗೆ ಕರೆ ತರಲಾಗಿತ್ತು. ಆದರೆ, ದುರಾದೃಷ್ಟಶಾತ್ ಆ ಪುಟ್ಟ ಕಂದಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಮ್ಹಾನ್ಸ್ ಆಸ್ಪತ್ರೆಯ ಆಡಳಿತ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಅಸುನೀಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಾಸನ ಜಿಲ್ಲೆಯ ಹಳೇಬೀಡು ಗ್ರಾಮದಲ್ಲಿ ವಾಸವಿದ್ದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಒಂದು ವರ್ಷದ ಪುತ್ರ ನಿನ್ನೆ ರಾತ್ರಿ 2ನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಮಗವನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಶಿಪಾರಸ್ಸು ಮಾಡಲಾಗಿತ್ತು

ವೈದ್ಯರ ಸೂಚನೆ ಮೇರೆಗೆ ಮೊದಲೇ ಮಾಹಿತಿ ನೀಡಿ ಝೀರೋ ಟ್ರಾಫಿಕ್ ಮೂಲಕ ಕೇವಲ 2 ಗಂಟೆಗಳ ಅವಧಿಯಲ್ಲಿ ಮಗುವನ್ನು ನಿಮ್ಹಾನ್ಸ್ ತಲುಪಿಸಿದರು. ಆದ್ರೆ, ಆಸ್ಪತ್ರೆ ಆಡಳಿತ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ.

ಮಗುವನ್ನು 1 ಗಂಟೆ ಕಾಯಿಸಿದ ಸಿಬ್ಬಂದಿ

ನಿಮ್ಹಾನ್ಸ್ ಆಸ್ಪತ್ರೆಗೆ ಮಗುವಿನ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಆದ್ರೆ, ಮಗುವನ್ನು ದಾಖಲು ಮಾಡಿಕೊಳ್ಳದೆ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಸುಮಾರು 1 ಗಂಟೆ ಕಾಯಿಸಿದ್ದಾರೆ. ಇದೇ ದುರಂತಕ್ಕೆ ಕಾರಣ ಮಗುವಿನ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನನ್ನ ಮಗುವಿಗೆ ಆದಂತೆ ಇನ್ಯಾರಿಗೂ ಈ ರೀತಿ ಆಗದಂತೆ ನೋಡಿಕೊಳ್ಳಲಿ ನೋವಿನಿಂದಲೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಉಸಿರು ಚೆಲ್ಲಿದ ಬಾಳಿ ಬದುಕಬೇಕಾದ ಕಂದ

ಕೂಲಿ ನಾಲಿ ಮಾಡಿ ಸಾಕಿದ್ದ ಹೆತ್ತ ಕಂದಮ್ಮನನ್ನು ಕಣ್ಣೆದುರೇ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಕಡು ಬಡತನದಲ್ಲೂ ಮಗುವನ್ನು ಉಳಿಸಿಕೊಳ್ಳಬೇಕು ಎಂಬ ಮಹದಾಸೆ ಹುಸಿಯಾಗಿದೆ. ನಿಮ್ಹಾನ್ಸ್ ವೈದ್ಯರ ಹಾಗೂ ಆಡಳಿತ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಳಿ ಬದುಕಬೇಕಾದ ಕಂದ ಅಸುನೀಗಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಈ ರೀತಿಯ ಪ್ರಕರಣಗಳು ಆಗದಂತೆ ನೋಡಿಕೊಳ್ಳಲಿ ಎನ್ನುವುದು ನಮ್ಮ ಆಶಯ.

RELATED ARTICLES

Related Articles

TRENDING ARTICLES